ಹುಬ್ಬಳ್ಳಿಯಲ್ಲಿ ವೈದ್ಯನ ಕೊಲೆ

A doctor murdered in hubballi

14-03-2018

ಹುಬ್ಬಳ್ಳಿ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವೈದ್ಯರೊಬ್ಬರನ್ನು ಕೊಲೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಡಾ.ಬಾಬು ಹಂಡೇಕರ್ ಹತ್ಯೆಯಾದ ವೈದ್ಯ. ಹುಬ್ಬಳ್ಳಿಯ ಶುಶ್ರುತ ನರ್ಸಿಂಗ್ ಹೋಮ್ ನಿರ್ದೇಶಕರಾಗಿದ್ದ ಇವರು, ಎರಡು ದಿನಗಳ ಹಿಂದೆ ಊರಿಂದ ಹೊರಗಡೆ ಹೋಗುತ್ತಿರುವುದಾಗಿ ಸ್ನೇಹಿತರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದರು. ನಂತರ ನಾಪತ್ತೆಯಾಗಿರುವ ವೈದ್ಯ ಇದೀಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಹಣಕಾಸಿನ ವಿಚಾರವಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ, ವಿದ್ಯಾನಗರ ಠಾಣೆ ಪೊಲೀಸರಿಂದ ಆರೋಪಿ ನವೀನ್ ಮುಲ್ಕಿಗೌಡರ್ ಹಾಗೂ ಸಹಚರರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Murder doctor ನಿರ್ದೇಶಕ ನಾಪತ್ತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ