ನಟ ವಿಕ್ರಂ ಕಾರ್ತಿಕ್ ಮೇಲೆ ಹಲ್ಲೆ, ದರೋಡೆ

Actor Vikram Karthik was attacked and robbed

14-03-2018

ಬೆಂಗಳೂರು: 'ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು' ಚಿತ್ರದ ನಾಯಕ ನಟ ವಿಕ್ರಮ್ ಕಾರ್ತಿಕ್ ಮೇಲೆ ಹಲ್ಲೆ ಮತ್ತು ದರೋಡೆ ನಡೆದಿದೆ. ನಗರದ ಶಂಕರಮಠದ ಬಳಿ ನಿನ್ನೆ ತಡರಾತ್ರಿ ಸ್ನೇಹಿತನನ್ನು ಡ್ರಾಪ್ ಮಾಡಿ ವಾಪಸ್ಸು ಬರುತ್ತಿದ್ದಾಗ 8 ಮಂದಿ ದರೋಡೆಕೋರರ ಗ್ಯಾಂಗ್ ಅಟ್ಯಾಕ್ ಮಾಡಿದೆ. ಹಲ್ಲೆ ಮಾಡಿ ನಟನ ಬಳಿಯಿದ್ದ ಎರಡು ಮೊಬೈಲ್, ಲ್ಯಾಪ್ ಟ್ಯಾಪ್, ಸ್ವಿಫ್ಟ್ ಕಾರು ಸಮೇತ ಎಸ್ಕೇಪ್ ಆಗಿದ್ದಾರೆ.

ತನ್ನ ಸ್ನೇಹಿತನನ್ನು ಡ್ರಾಪ್ ಮಾಡಿ ವಾಪಸ್ ಬರುವ ವೇಳೆ ಕಾರಿಗೆ ಅಡ್ಡ ಬಂದ ದುಷ್ಕರ್ಮಿಗಳು, ಕ್ಯಾಶ್ ಎಷ್ಟಿದೆ, ಏನೇನಿದೆ ಇದೆ ಕೊಡು ಅಂತ ಬೆದರಿಕೆ ಹಾಕಿ, ಬಳಿಕ ಕಾರ್ ನಿಂದ ವಿಕ್ರಮ್ ಕಾರ್ತಿಕ್ ರನ್ನು ಆಚೆಗೆ ತಳ್ಳಿ ಅದೇ ಕಾರಿನಲ್ಲಿ ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಾದ ನಟ ವಿಕ್ರಮ್ ಕಾರ್ತಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ, ಕತ್ತಿನ ಭಾಗಕ್ಕೆ ತೀವ್ರಗಾಯಗಳಾಗಿವೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ