ಜೆಡಿಎಸ್ ಮತ್ತು ಎಎಪಿ ಬೆಂಬಲಿಗರ ನಡುವೆ ವಾಗ್ವಾದ

The dispute between the JDS and the AAP supporter

14-03-2018

ಕೊಪ್ಪಳ: ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಮತ್ತು ಆಪ್ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಕಳಪೆ ಮಟ್ಟದ ಸಿಸಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಕಾಮಗಾರಿಯನ್ನು ಆಪ್ ಕಾರ್ಯಕರ್ತರು ತಡೆದಿದ್ದಾರೆ. ಕಾಮಗಾರಿಯ ಕ್ವಾಲಿಟಿ ಬಗ್ಗೆ ಕೇಳಿದಾಗ ರೊಚ್ಚಿಗೆದ್ದ ಅನ್ಸಾರಿ ಬೆಂಬಲಿಗರು ಇದು ನಮ್ ಏರಿಯಾ, ನಮ್ ಇಷ್ಟ ಹೆಂಗಾದರೂ ಮಾಡ್ಕೋತೀವಿ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಇದನ್ನು ವಿರೋಧಿಸಿದ ಆಪ್ ಕಾರ್ಯಕರ್ತರು ಕಳಪೆ ಕಾಮಗಾರಿ ಮಾಡುವುದಕ್ಕೆ ಬಿಡುವುದಿಲ್ಲಾ, ಟೆಂಡರ್ ನಿಯಮದಂತೆ ಕಾಮಗಾರಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ತಾರಕ್ಕೇರಿತು. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದೂ ಈಗಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.


ಸಂಬಂಧಿತ ಟ್ಯಾಗ್ಗಳು

concrete road AAP ಟೆಂಡರ್ ಉದ್ವಿಗ್ನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ