ಕ್ಷುಲ್ಲಕ ಕಾರಣಕ್ಕೆ ರೈತನ ಮೇಲೆ ಹಲ್ಲೆ

The farmer has been attacked by ex taluk panchayath member followers

14-03-2018

ಕಲಬುರಗಿ: ರೈತನ ಮೇಲೆ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯನ ಬೆಂಬಲಿಗರು ದರ್ಪ ತೋರಿ ಹಲ್ಲೆ ಮಾಡಿದ್ದಾರೆ. ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಸೀತಾರಾಮ ಸುಬೇದಾರ್ ಕಾರು ಬಂದಾಗ ಎದ್ದು ನಿಲ್ಲಲಿಲ್ಲ ಎಂದು ಅಮಾಯಕ ರೈತರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ವೃದ್ಧ ರೈತ ಲಕ್ಕಪ್ಪ ಜಯದೇವ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಸೀತಾರಾಂ ಸುಬೇದಾರ್ ಶಾಸಕ ಅಜಿತ್ ಸಿಂಗ್ ಬೆಂಬಲಿಗ ಎನ್ನಲಾಗಿದೆ. ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಸೀತಾರಾಂ ಸುಬೇದಾರ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ, ರೌಡಿ ಶೀಟರ್ ಪಟ್ಟಿಯಲ್ಲಿ ಈತನ ಹೆಸರಿದೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Taluk Panchayat Manhandling ಅಮಾಯಕ ರೌಡಿ ಶೀಟರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ