ಐವರು ಕೊಲೆಗಡುಕರ ಬಂಧನ

Murder: 5 accused arrested

13-03-2018

ಬಳ್ಳಾರಿ: ರಂಜಿತ್ ಕುಮಾರ್ ಕೊಲೆ ಪ್ರಕರಣ ಭೇದಿಸಿರುವ ಪೋಲಿಸರು, ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಳ್ಳಾರಿ ಗ್ರಾಮೀಣ ಪೊಲೀಸರು ಹೊಸಪೇಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಸವರಾಜ್, ರಾಘವೇಂದ್ರ, ಶರ್ಮಾಸ್, ಇರ್ಫಾನ್, ಪರುಶುರಾಮ್ ಬಂಧಿತ ಆರೋಪಿಗಳು. 7-03-2018 ರಂದು ನಿವೃತ್ತ ಪಿಎಸ್ಐ ಯೋಹಾನಯ್ಯನವರ ಮಗ ರಂಜಿತ್ ಕುಮಾರ್ ಅವರ ಕೊಲೆ ಬಳ್ಳಾರಿಯ ಸಿರುಗುಪ್ಪ ರಸ್ತೆಯ ಹೊಲದಲ್ಲಿ ನಡೆದಿತ್ತು. ವಿಚಾರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಎಣ್ಣೆ ಪಾರ್ಟಿ ಮಾಡುವ ಸ್ಥಳಕ್ಕಾಗಿ ಕೊಲೆ ನಡೆದಿದೆ ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆರೋಪಿಗಳೆಲ್ಲರೂ  ಬಳ್ಳಾರಿಯ ಹವ್ವಂಬಾವಿ ನಿವಾಸಿಗಳು ಎಂದು ತಿಳಿದು ಬಂದಿದೆ. ಬಳ್ಳಾರಿ ಎಸ್ಪಿ ಆರ್.ಚೇತನ್ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Murder accused ಪಿಎಸ್ಐ ವಿಚಾರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ