ವೋಟರ್ ಐಡಿ ಗೋಲ್ ಮಾಲ್..!

voter id golmaal..!

13-03-2018 472

ಬೆಂಗಳೂರು: ಒಂದೇ ವಿಳಾಸದಲ್ಲಿ 39 ನಕಲಿ ವೋಟರ್ ಐಡಿಗಳು ಪತ್ತೆಯಾಗಿವೆ. ನಗರದ ವೈಟ್ ಫೀಲ್ಡ್  ನಲ್ಲಿರುವ ಸತ್ಯಸಾಯಿ ಆಸ್ಪತ್ರೆ ವಿಳಾಸ ನೀಡಿ, ನಕಲಿ ಮತದಾರರ ಚೀಟಿ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಸತ್ಯಸಾಯಿ ಆಸ್ಪತ್ರೆ ದೇವಸಂದ್ರ ವಾರ್ಡ್ ನಂ 55ರ ಕಾರ್ಪೋರೇಟರ್ ಶ್ರೀಕಾಂತ್ ಒಡೆತನದದಲ್ಲಿದೆ. ಕಾರ್ಪೋರೇಟರ್ ಶ್ರೀಕಾಂತ್ ಶಾಸಕ ಭೈರತಿ ಬಸವರಾಜ್ ಬಲಗೈ ಬಂಟ ಎಂದು ಹೇಳಲಾಗುತ್ತಿದ್ದು, ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ರೋಗಿಯೊಬ್ಬರ ಮೇಲೆ ಶ್ರೀಕಾಂತ್ ಹಲ್ಲೆ ನಡೆಸಿದ್ದರು. ಅದಲ್ಲದೇ ಭೈರತಿಯವರ ಮತ್ತೊಬ್ಬ ಬಂಟ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಸುರಿದು ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ವೋಟರ್ ಐಡಿ ಗೋಲ್ ಮಾಲ್ ಬೆಳಕಿಗೆ ಬಂದಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ