ಮನೋಜ್ ಕಾರ್ತಿಕ್ ನ ಮತ್ತೊಂದು ವಂಚನೆ

another fraude of sindhu menon brother

13-03-2018 201

ಬೆಂಗಳೂರು: ನಟಿ ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕ್ ವಿರುದ್ಧ ಮತ್ತೊಂದು ಪ್ರಕರಣ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಚೇರಿಗೆಂದು ಕಟ್ಟಡ ಬೋಗ್ಯಕ್ಕೆ ಪಡೆದು ವಂಚನೆ ನಡೆಸಿರುವ ಅರೋಪದಡಿ ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕ್ ಹಾಗೂ ಸುಧಾ ರಾಜಶೇಖರ್ ವಿರುದ್ಧ ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಿಂಧು ಮೆನನ್ ಸಹೋದರ ಮನೋಜ್ ಕಟ್ಟಡದ ದಾಖಲೆಗಳನ್ನು ನಕಲು ಮಾಡಿ ಬ್ಯಾಂಕಿನಲ್ಲಿ ಸಾಲ ಪಡೆದು ಕಚೇರಿ ಪ್ರಾರಂಭಿಸಲು ಕಮರ್ಷಿಯಲ್ ಜಾಗ ಬೇಕು ಎಂದು ಗಣೇಶ್ ರಾವ್‍ರನ್ನು ಸಂಪರ್ಕಿಸಿದ್ದ. ನಂತರ ಮನೋಜ್ ಕಟ್ಟಡ ಮಾಲೀಕ ಗಣೇಶ್ ರಾವ್ ರಿಂದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಕಟ್ಟಡದ ದಾಖಲೆಗಳನ್ನ ಪಡೆದಿದ್ದ.

ಮೂರು ತಿಂಗಳ ಬಳಿಕ ಕಚೇರಿ ಬೇಡ ಎಂದು ಬೀಗ ವಾಪಸ್ ನೀಡಿದ್ದು, ಬ್ಯಾಂಕ್ ಸಾಲ ಆಗಿಲ್ಲ. ನಿಮ್ಮ ಮಳಿಗೆ ಬೇಡ ಎಂದು ಮನೋಜ್ ಹೇಳಿದ್ದ. ಅಗ್ರೀಮೆಂಟ್ ದಾಖಲೆಗಳನ್ನು ಕೇಳಿದಾಗ ತಂದು ಕೊಡುತ್ತೇನೆ ಎಂದು ಮನೋಜ್ ಕೈ ಎತ್ತಿದ್ದ. ಗಣೇಶ್ ರಾವ್ ಮನೆ ದಾಖಲೆಗಳನ್ನು ಅಡವಿಟ್ಟು ವಿಜಯಾ ಬ್ಯಾಂಕಿನಲ್ಲಿ ಲೋನ್ ಗೆ ಅರ್ಜಿ ಹಾಕಿದ್ದ. ಬಾಡಿಗೆ ಕಟ್ಟಡವನ್ನ ಸ್ವಂತದ್ದು ಎಂದು ಮನೋಜ್ ಉಲ್ಲೇಖಿಸಿದ್ದನು. ಅಷ್ಟೇ ಅಲ್ಲದೇ ಲೋನ್‍ಗೆ ಶ್ಯೂರಿಟಿ ಗಣೇಶ್ ರಾವ್ ಎಂದು ಫಾರಂ 16 ರಲ್ಲಿ ಉಲ್ಲೇಖವಾಗಿತ್ತು. ಸಿಂಧು ಮೆನನ್ ಸಹೋದರನ ವಂಚನೆ ವಿರುದ್ಧ ಗಣೇಶ್ ರಾವ್ ದೂರು ನೀಡಿದ್ದಾರೆ. ಸದ್ಯ ಯಶವಂತಪುರ ಪೊಲೀಸರು ದೂರು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

sindhu menon manoj kartik ವಂಚನೆ ಬ್ಯಾಂಕ್ ಸಾಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ