ಕೊಪ್ಪಳದ ಎಸ್‍ಪಿ ವರ್ಗಾವಣೆಗೆ ತಡೆ

Prevented Koppal SP Transfer

13-03-2018 527

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಆರೋಪದ ಬೆನ್ನಲ್ಲೇ ರಾಜ್ಯ ಸಕಾರಕ್ಕೆ ಮತ್ತೊಮ್ಮೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ವರ್ಗಾವಣೆ ವಿಷಯದಲ್ಲಿ ಭಾರೀ ಮುಖಭಂಗ ಎದುರಿಸಬೇಕಾಗಿ ಬಂದಿದೆ. ತಮ್ಮ ದಿಢೀರ್ ವರ್ಗಾವಣೆ ಪ್ರಶ್ನಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ಮೊರೆ ಹೋಗಿದ್ದ ಎಸ್‍ಪಿ ಡಾ.ಅನೂಪ್ ಎ.ಶೆಟ್ಟಿ ವರ್ಗಾವಣೆಗೂ ತಾತ್ಕಾಲಿಕ ತಡೆ ನೀಡಿರುವುದು ರಾಜ್ಯ ಸರ್ಕಾರ ಮುಜುಗರ ಎದುರಿಸುವಂತಾಗಿದೆ.

ಒಂದು ವರ್ಷಕ್ಕೂ ಮುನ್ನ ವರ್ಗಾವಣೆ ಮಾಡಲಾಗಿದೆ. ಇದು ನಿಯಮಬಾಹಿರ ಎಂದು ಅನೂಪ್ ಶೆಟ್ಟಿ ಅವರು ಅರ್ಜಿಯಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸದ್ಯ ಅನೂಪ್ ವರ್ಗಾವಣೆಗೆ ನ್ಯಾಯಮಂಡಳಿಯಿಂದ ತಡೆ ನಿಡಿದ್ದು, ಮಾರ್ಚ್ 22ರಂದು ಮುಂದಿನ ವಿಚಾರಣೆ ನಡೆಯಲಿದೆ.

ಕಳೆದ 8ತಿಂಗಳ ಹಿಂದಷ್ಟೇ ಜಿಲ್ಲೆಗೆ ಆಗಮಿಸಿದ ಡಾ.ಅನೂಪ್ ಶೆಟ್ಟಿ ಅಕ್ರಮಗಳಿಗೆ ಕಡಿವಾಣ ಹಾಕಿ ಹೆಸರು ಮಾಡಿದ್ದರು. ಇದೀಗ ಸರ್ಕಾರ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಅನೂಪ್ ಶೆಟ್ಟಿ ಸಿಎಟಿ ಮೊರೆ ಹೋಗಿದ್ದರು.

 


ಸಂಬಂಧಿತ ಟ್ಯಾಗ್ಗಳು

tribunal superintendent ವರ್ಗಾವಣೆ ನ್ಯಾಯಮಂಡಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ