'ಕೂಲಿ ಮಾಡಿ ಸಂಬಳಕ್ಕಾಗಿ ಬಂದಿದ್ದೇವೆ'13-03-2018

ಹಾವೇರಿ: ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸು ಮಾಡುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗುವುದು. ಪ್ರತೇಕ ಧರ್ಮದ ಶಿಫಾರಸ್ಸು ಮಾಡಲು ವಯಕ್ತಿಕ ಅಭಿಪ್ರಾಯ ಬರಲ್ಲ. ಸಮೂಹ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯ ಪರಿಗಣಿಸಿ ಶಿಫಾರಸ್ಸು ಮಾಡಲಾಗುವುದು ಎಂದು ಹಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಈಗಾಗಲೇ ನಾಗ್‌ ಮೋಹನ್‌ ದಾಸ್‌ ಅವರ ನೇತೃತ್ವದ ತಜ್ಞರ ಸಮಿತಿ ವರದಿ ನೀಡಿದೆ. ಅದರ ಮೇಲೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು ಎಂದರು. ರಾಜ್ಯಸಭಾದ ಮೂರು ಸ್ಥಾನಗಳನ್ನು ನಾವೇ ಗೆಲ್ಲುವ ಸ್ಥಾನ ಹೊಂದಿದ್ದೇವೆ. ಜೆಡಿಎಸ್ ಜೊತೆಗೆ ಹೊಂದಾಣಿಕೆ ಪ್ರಶ್ನೆ ಉದ್ಭವಿಸುವದಿಲ್ಲ,  ಇನ್ನು ಹುಬ್ಬಳ್ಳಿಯಲ್ಲಿ ವಿಜಯ ಸಂಕೇಶ್ವರ್ ಮಾಡಿರುವ ಆರೋಪ ಬೇಸ್ ಲೆಸ್ ಅವರು ಮಾಡಿರುವ ಆರೋಪ ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ ಎಂದರು.

ಕೂಲಿ ಮಾಡಿದ್ದೇವೆ ಸಂಬಳ ಕೇಳಲು ನಿಮ್ಮ ಮುಂದೆ ಬರುತ್ತಿದ್ದೇವೆ, ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಹಾವೇರಿ ಮತದಾರರಲ್ಲಿ ಸಿಎಂ ಮನವಿ ಮಾಡಿದರು. ಯಡಿಯೂರಪ್ಪ ಕೊಟ್ಟ ಕುದುರೆಯನ್ನು ಏರದಾತ, ಆತ ವೀರನೂ ಅಲ್ಲ ಶೂರನೂ ಅಲ್ಲಾ ಎಂದು ವಾಗ್ದಾಳಿ ನಡೆಸಿದರು.

ನುಡಿದಂತೆ ನಡೆದಿದೆ ನಮ್ಮ ಸರ್ಕಾರ, ಕೊಟ್ಟ 165 ಭರವಸೆಯಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ, ಎಲ್ಲ ವರ್ಗದ ಜನರು ನೆಮ್ಮದಿಯಿಂದ ಇರುವಂತೆ ಮಾಡಿದೆ ನಮ್ಮ ಸರ್ಕಾರ. ಇಂಥಾ ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಹೇಳುವ ಬಿಜೆಪಿ ನಾಯಕರಿಗೆ ನಾಚಿಕೆಯಾಗ ಬೇಕು, ತಮ್ಮ ಅವಧಿಯಲ್ಲಿ ಜೈಲ್ ಪರೇಡ್ ಮಾಡಿದ್ದಾರೆ. ರಾಜ್ಯ ಲೂಟಿ ಹೊಡೆದವರು ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

siddaramaiah Vijay Sankeshwar ಸರ್ಕಾರ ನೈತಿಕತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ