‘ಬಿಜೆಪಿ ಆಡಳಿತ ಇರುವಲ್ಲಿ ಅನ್ನಭಾಗ್ಯ ಯಾಕಿಲ್ಲ’..?13-03-2018

ಶಿವಮೊಗ್ಗ: ರಾಜ್ಯದ ಸರ್ವರಿಗೂ ಪಡಿತರ ಚೀಟಿ ದೂರಕುವಂತೆ ಮಾಡುವುದು ನಮ್ಮ ಸರ್ಕಾರದ ಗುರಿ ಎಂದು ಆಹಾರ ಖಾತೆ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಸುಮಾರು 81 ಸಾವಿರದಷ್ಟು ಜನ ಪಡಿತರ ಚೀಟಿಗೆ ಅರ್ಜಿ ಹಾಕಿದ್ದರು. ಈಗ 53 ಸಾವಿರದಷ್ಟು ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಉಳಿದವುಗಳನ್ನು ಶೀಘ್ರದಲ್ಲೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಪಡಿತರ ಚೀಟಿ ವಿತರಣಾ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ. ಸರ್ಕಾರದ ಸವಲತ್ತು ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ಪಡಿತರ ಚೀಟಿ ವಿತರಣೆ ಮಾಡಲಾಗುತ್ತಿದೆ ಎಂದರು.

ಅನ್ನಭಾಗ್ಯ ಸೋರಿಕೆಯನ್ನು ತಡೆಗಟ್ಟಲಾಗಿದೆ. ಅನ್ನಭಾಗ್ಯವನ್ನು ಟೀಕೆ ಮಾಡಿದವರೂ ಸಹ ಅನ್ನಭಾಗ್ಯ ನಮ್ಮ ಭಾಗ್ಯ ಎನ್ನುವಂತೆ ಆಗಿದೆ. ಬಿಜೆಪಿಯವರದು ಟೀಕೆ ಮ‌ಾಡುವುದೇ ಕೆಲಸವಾಗಿದೆ, ಬಿಜೆಪಿ ಅಧಿಕಾರ ಇರುವ ಕಡೆ ಯಾಕೆ ಈ ರೀತಿಯ ಯೋಜನೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದ್ದಾರೆ. ಕೇಂದ್ರದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ಬರುವ ಮುನ್ನಾವೇ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿತ್ತು. ಶ್ರೀಮಂತರು ಸಹ ಬಡವರ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡುವಂತೆ ರಾಜ್ಯ ಸರ್ಕಾರ ಮಾಡಿದೆ ಎಂದರು. ನಾವು ಬಿಜೆಪಿ ಮುಕ್ತ ಅಂತ ಹೇಳುವುದಿಲ್ಲ, ನಮಗೆ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಕೊಳ್ಳಲು ಬಿಜೆಪಿ ಬೇಕು ಎಂದು ವ್ಯಂಗ್ಯವಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ