ಚಿಕ್ಕಮಗಳೂರಿನಲ್ಲಿ ಕಾಡ್ಗಿಚ್ಚಿನ ಅಬ್ಬರ

heavy fire at chikmagalur forest

13-03-2018

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕಾಡ್ಗಿಚ್ಚಿನ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸಂಸೆ ಬಳಿ ಕಾಡ್ಗಿಚ್ಚಿನ ಆರ್ಭಟಕ್ಕೆ ನೂರಾರು ಎಕರೆ ಅರಣ್ಯ ಸುಟ್ಟು ಕರಕಲಾಗಿದೆ. ಹುಲುಸಾಗಿ ಬೆಳೆದು ನಿಂತಿದ್ದ ದಟ್ಟ ಅರಣ್ಯದಲ್ಲಿನ ಹೊನ್ನೆ, ಬೀಟೆ, ತೇಗ, ನಂದಿ ಮರಗಳು ಬೆಂಕಿಗಾಹುತಿಯಾಗಿವೆ. ರಾತ್ರಿ ಇಡೀ ಅರಣ್ಯ ಹೊತ್ತಿ ಉರಿದರು ಬೆಂಕಿ ನಂದಿಸುವ ಕಾರ್ಯ ಅರಣ್ಯ ಸಿಬ್ಬಂದಿ ಕೈಗೊಂಡಿಲ್ಲ. ಸ್ಥಳಿಯರು ಮಾಹಿತಿ ನೀಡಿದರೂ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಕಾಲಿಟ್ಟಿಲ್ಲ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

wild forest trees ಕಾಡ್ಗಿಚ್ಚು ಅರಣ್ಯಾಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ