'ಕೇಂದ್ರ ಸರ್ಕಾರದಿಂದ ಕರ್ನಾಟಕ ನಿರ್ಲಕ್ಷ್ಯ'12-03-2018

ಮಂಡ್ಯ: ಮಂಡ್ಯದಲ್ಲಿ ಅಂಬೇಡ್ಕರ್ ಭವನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಹಾಗು ಕಾಂಗ್ರೆಸ್ ಶಾಸಕ ಅಂಬರೀಷ್, ಅಂಬೇಡ್ಕರ್ ಬರೆದಿರೋದು ಸಂವಿಧಾನವಲ್ಲ, ಮನುಷ್ಯನಿಗೆ ಮನುಷ್ಯತ್ವ ಅರಿತು ನಡೆಯುವಂತೆ ತಿಳಿ ಹೇಳಿರುವ ಗ್ರಂಥ, ಅದನ್ನರಿತು ನಾವು ಸಾಗಬೇಕಿದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ನಾನು ಅನ್ನೋದಕ್ಕಿಂತ ನಾವು ಎಂದು ಮುನ್ನಡೆಯಬೇಕು ಎಂದರು.

ಏನಪ್ಪ ಅಂಬರೀಷ್ ಚುನಾವಣೆ ಟೈಮಲ್ಲಿ ಕ್ಷೇತ್ರಕ್ಕೆ ಬರ್ತಿದ್ದಾನೆ ಅಂದುಕೊಳ್ಳಬೇಡಿ, ಅನಾರೋಗ್ಯದಿಂದ ಬರಲು ಸಾಧ್ಯವಾಗಿರಲಿಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತೆ ಪುನರ್ಜನ್ಮ ಪಡೆದಿದ್ದೇನೆ. ಇಷ್ಟಾದ್ರು ನಾನು‌ ಕ್ಷೇತ್ರದಲ್ಲಿ ಹಲವು ಅಭಿವೃದ್ದಿ ಕೆಲಸ ಮಾಡಿದ್ದೇನೆ ಎಂದರು. ಕೇಂದ್ರ ಸರ್ಕಾರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡತ್ತಿದೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋ ಕಾರಣದಿಂದ ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದರು.

 

 

 

 


ಸಂಬಂಧಿತ ಟ್ಯಾಗ್ಗಳು

Ambareesh B.R.Ambedkar ಕೇಂದ್ರ ಸರ್ಕಾರ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ