ಎಂಜಿನಿಯರ್ ಮನೆಯಲ್ಲಿ ಲಕ್ಷಾಂತರ ದರೋಡೆ

robbery at a Engineer home in bangalore

12-03-2018

ಬೆಂಗಳೂರು: ಬಿಎಸ್‍ಕೆ ಮೊದಲನೇ ಹಂತದ 80ಅಡಿ ರಸ್ತೆಯಲ್ಲಿನ ಸಿವಿಲ್ಎಂಜಿನಿಯರ್ ಒಬ್ಬರ ಮನೆಯ ಬೀಗ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು 2.5 ಲಕ್ಷ ನಗದು, 93 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಸಿವಿಲ್ ಎಂಜಿನಿಯರ್ ಚಂದ್ರ ಅವರು ನಿನ್ನೆ ಮಧ್ಯಾಹ್ನ ಬೀಗ ಹಾಕಿಕೊಂಡು ಕುಟುಂಬ ಸಮೇತ ಹೊರಹೋಗಿದ್ದರು. ವಾಪಸ್ ರಾತ್ರಿ 7ರ ವೇಳೆಗೆ ಬರುವಷ್ಟರಲ್ಲಿ ಮನೆಯ ಮುಂಬಾಗಿಲು ಮುರಿದು ದುಷ್ಕರ್ಮಿಗಳು ಒಳನುಗ್ಗಿದ್ದರು. ಮನೆಯಲ್ಲಿನ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಕಬೋರ್ಡ್ ಬಾಗಿಲು ಮುರಿದು 2.5 ಲಕ್ಷ ನಗದು, ಬ್ರಾಸ್‍ಲೆಟ್, ಚಿನ್ನದ ಸರ ಸೇರಿ, 93 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಚಂದ್ರ ಅವರು ನೀಡಿರುವ ದೂರು ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು, ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Engineer theft ನಗದು ಚಿನ್ನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ