ಸರಗಳ್ಳನ ಹಿಡಿದು ಶೌರ್ಯ ಮೆರೆದ ಯುವಕ

A young man chased and arrested chain snatcher

12-03-2018

ಬೆಂಗಳೂರು: ವಾಯು ವಿಹಾರಕ್ಕೆ ಹೋಗಿದ್ದ ಮಹಿಳೆಯೊಬ್ಬರ ಮಾಂಗಲ್ಯಸರ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಯುವಕನೊಬ್ಬ ಬೆನ್ನಟ್ಟಿ ನಗರ ಪೊಲೀಸರಿಗೆ ಹಿಡಿದುಕೊಟ್ಟು ಶೌರ್ಯ ಮರೆದು ನಗರ ಪೊಲೀಸ್ ಆಯುಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರತ್ನಮ್ಮ ಅವರು ನಿನ್ನೆ ಸಂಜೆ 7.30ರ ಸುಮಾರಿನಲ್ಲಿ ಹೊಸಕೆರೆ ಹಳ್ಳಿಯ 6ನೇ ಮುಖ್ಯರಸ್ತೆಯಲ್ಲಿ ವಾಯುವಿಹಾರ ಮಾಡಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ, ಸುಜುಕಿ ಆಕ್ಸಿಸ್ ಬೈಕ್‍ನಲ್ಲಿ ಬಂದ ಸ್ಪಾಟ್ ನಾಗ(30) ಹಾಗೂ ಜೋಸೆಫ್(25) ಹಿಂದಿನಿಂದ ಬಂದು ಸರ ಕಸಿದು ಪರಾರಿಯಾದರು.

ಅದೇ ಮಾರ್ಗದಲ್ಲಿ ಬೈಕ್‍ನಲ್ಲಿ ಬಂದ ಉದ್ಯಮಿ ರವಿಕುಮಾರ್ ಬೆನ್ನಟ್ಟಿ ಹೋಗಿದ್ದು, ಬ್ಯಾಟರಾಯನಪುರದ ಮೈಸೂರು ರಸ್ತೆಯ ಬಳಿಯ ಸಂಚಾರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೇದೆ ಮಂಜುನಾಥ್ ಅವರು ಕೂಡಲೇ ರವಿಕುಮಾರ್ ಜೊತೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹಿಡಿದು ಗಿರಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ. ಇಬ್ಬರು ಸರಗಳ್ಳರನ್ನು ಹಿಡಿಯುವಲ್ಲಿ ಶೌರ್ಯ ಮರೆದ ರವಿಕುಮಾರ್ ಅವರನ್ನು ನಗರ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್ ಅಭಿನಂದಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

chain snatch robbery ಶೌರ್ಯ ಸುಜುಕಿ ಆಕ್ಸಿಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ