ಮರಕ್ಕೆ ಕಾರು ಡಿಕ್ಕಿ ನಾಲ್ವರ ದುರ್ಮರಣ

car accident: four were dead

12-03-2018

ಬೆಂಗಳೂರು: ನಗರದ ಹೊರವಲಯದ ದೇವನಹಳ್ಳಿ-ವಿಜಯಪುರ ರಸ್ತೆಯ ದರ್ಗಾ ಬಳಿ ವೇಗವಾಗಿ ಹೋಗುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು ಒಂದೇ ಕುಟುಂಬದ ನಾಲ್ವರು ಮೃತಪಟ್ಟು 5 ಮಂದಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಾರಹಳ್ಳಿಯ ಪಾರ್ವತಮ್ಮ(68), ವಿಜಯ್ ಕುಮಾರ್(42) ಮತ್ತು ಹರೀಶ್ (38) ಹಾಗೂ ಶೃತಿ(28) ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಅಫಘಾತದಲ್ಲಿ ಗಾಯಗೊಂಡಿರುವ ಸುಮಿತ್ರ, ಕಿಶನ್‍ಗೌಡ, ಕವಿತಾ ರಾಧಾ ಪುರುಷೋತ್ತಮ್ ಸೇರಿ 5 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಗೊಂಡಿರುವವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು ನಗರದ  ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಕೈವಾರದಲ್ಲಿ ನಡೆಯುತ್ತಿದ್ದ ಗಂಗಮ್ಮ ದೇವಿಯ ಪೂಜಾ ಕಾರ್ಯಕ್ರಮಕ್ಕೆ ಮೃತರು ಸೇರಿ 9 ಮಂದಿ ಕಾರಿನಲ್ಲಿ ಹೋಗಿ ಪೂಜೆ ಮುಗಿಸಿಕೊಂಡು ಸಂಜೆ ವಾಪಾಸಾಗುತ್ತಿದ್ದರು.

ಮಾರ್ಗ ಮಧ್ಯೆ  ದೇವನಹಳ್ಳಿ-ವಿಜಯಪುರ ರಸ್ತೆಯ ದರ್ಗಾ ಬಳಿ ಚಾಲಕನ ಅತಿವೇಗ ಹಾಗೂ ಅಜಾಗಾರೂಕತೆಯಿಂದ ನಿಯಂತ್ರಣ ತಪ್ಪಿ ಕಾರು ದರ್ಗಾದ ಬಳಿ ಮರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ವಿಜಯಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

accident fire fast ಕಾರ್ಯಕ್ರಮ ಪರಿಶೀಲನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ