‘ಐಪಿಎಸ್ ಅಧಿಕಾರಿಗಳು ಬಂಡಾಯ ಎದ್ದಿಲ್ಲ’-ಸಿಎಂ12-03-2018

ಬಾಗಲಕೋಟೆ: ನಲಪಾಡ್ ಪ್ರಕರಣದಲ್ಲಿ ರಾಜ್ಯ ಸಕಾ೯ರ ಯಾವುದೇ ಒತ್ತಡಕ್ಕೆ ಮಣಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರ ಮಣಿಯುವ ಹಾಗಿದ್ದರೇ 326 ಬದಲಾಗಿ 307 ಕೇಸ್ ಹಾಕಲು ಆಗುತ್ತಿತ್ತಾ ಎಂದು ಸಿಎಂ ಪ್ರಶ್ನಿಸಿದ್ದಾರೆ. ಇದರಲ್ಲಿ ಯಾವುದೇ ಪ್ರಭಾವಕ್ಕೆ ಮಣಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳ ಬಂಡಾಯ ವಿಚಾರದ ಕುರಿತು ಪ್ರತಿಕ್ರಿಯಿಸಿ ಯಾವ ಅಧಿಕಾರಿಗಳೂ ಬಂಡಾಯ ಎದ್ದಿಲ್ಲ, ಬಂಡಾಯ ಎದ್ದವರ್ಯಾರು ಎಂದು ಮಾದ್ಯಮದವರನ್ನೇ ಪ್ರಶ್ನೆ ಮಾಡಿದ ಸಿದ್ದರಾಮಯ್ಯ, ಈ ಬಗ್ಗೆ ಯಾರೋ ಪತ್ರ ಬರೆದಿದ್ದಾರಂತೆ ಅದನ್ನು ನಾನು ನೋಡಿಲ್ಲ. ಈ ಬಗ್ಗೆ ಮುಖ್ಯಕಾರ್ಯದರ್ಶಿಯವರಿಂದ ಮಾಹಿತಿ ಕೇಳಿದ್ದೇನೆ. ಅವರ ಪತ್ರ ನೋಡಿ ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah IAS ಪ್ರಭಾವ ಬಂಡಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ