ಬಿಜೆಪಿ ಕಚೇರಿ ಮುಂದೆ ಯುವಕರ ಪ್ರತಿಭಟನೆ

12-03-2018
ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ, ಆಲ್ ಇಂಡಿಯಾ ಆ್ಯಕ್ಟ್ ಅಪ್ರೆಂಟಿಸ್ ಉದ್ಯೋಗಿಗಳು ಪ್ರತಿಭಟನೆ ನೆಡೆಸಿದ್ದಾರೆ. ದೇಶದಲ್ಲಿ 21,000 ಯುವಕರು ರೈಲ್ವೆ ಇಲಾಖೆಯಲ್ಲಿ ಟ್ರೈನಿಂಗ್ ಮಾಡಿದ್ದಾರೆ, ರಾಜ್ಯದಲ್ಲಿ 1500 ಮಂದಿ ಟ್ರೈನಿಂಗ್ ಮುಗಿಸಿದ್ದಾರೆ. ಆದರೆ ಎಷ್ಟೇ ಬೇಡಿಕೆ ಇಟ್ಟರೂ ಸಹ ರೈಲ್ವೆ ಇಲಾಖೆ ಅಪ್ರೆಂಟಿಸ್ ಉದ್ಯೋಗಿಗಳನ್ನ ಖಾಯಂ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಮಹಾರಾಷ್ಟ್ರದ ಟ್ರೈನಿಗಳನ್ನ ಖಾಯಂ ಮಾಡಿಕೊಳ್ಳಲಾಗಿದೆ, ಬಿಜೆಪಿಯ ಎಲ್ಲಾ ಸಂಸದರಿಗೂ ಈ ಅನ್ಯಾಯ ಮನವರಿಕೆ ಮಾಡಿಕೊಟ್ಟರೂ, ನ್ಯಾಯಸಿಕ್ಕಿಲ್ಲ ಹೀಗಾಗಿ ಬಿಜೆಪಿ ಕಚೇರಿಯ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತಿರುವುದಾಗಿ ಪ್ರತಿಭಟನಾನಿರತ ಯುವಕರು ತಿಳಿಸಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿದ ಶಾಸಕ ಆಶ್ವಥ್ ನಾರಾಯಣ ಪ್ರತಿಭಟನಕಾರರ ಮನವೂಲಿಸುವ ಪ್ರಯತ್ನ ಮಾಡಿದರು. ಇದೇ ವೇಳೆ ಬಿಎಸ್ ಯಡಿಯೂರಪ್ಪ ಆಗಮಿಸಿ, ಪ್ರತಿಭಟನಕಾರರ ಜೊತೆ ಮಾತುಕತೆ ಮಾಡಿದರು. ಬಳಿಕ ಮಾತನಾಡಿದ ಅವರು. ಮಹಾರಾಷ್ಟ್ರದಲ್ಲಿ ಹೇಗೇ ನೇಮಕಾತಿ ಮಾಡಿಕೊಂಡಿದ್ದಾರೋ, ಹಾಗೇ ನಮ್ಮಲ್ಲಿ ಕೂಡ ನೇಮಕಾತಿ ಮಾಡಿಕೊಳ್ಳಿ ಎಂದು ಒತ್ತಾಯ ಮಾಡುತ್ತೇವೆ, ಪೀಯೂಶ್ ಗೋಯಲ್ ಜೊತೆಗೆ ನಾನು ಹಾಗೂ ಅನಂತ್ ಕುಮಾರ ಮಾತುಕತೆ ಮಾಡುತ್ತೇವೆ ಆದರೆ ಭರವಸೆ ನೀಡಲ್ಲ ಎಂದರು, ಇದಕ್ಕೆ ಜಗ್ಗದ ಪ್ರತಿಭಟನಾಕಾರರು, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುಲು ಯತ್ನಿಸಿದರು. ಪ್ರತಿಭಟನಾಕಾರರ ವಿರುದ್ಧ ಕೋಪಿಸಿಕೊಂಡ ಯಡಿಯೂರಪ್ಪ ಕಚೇರಿಯೊಳಗೆ ನಡೆದರು.
ಒಂದು ಕಮೆಂಟನ್ನು ಹಾಕಿ