ವೈದ್ಯರ ನಿರ್ಲಕ್ಷ್ಯ ಶಿಶು ಸಾವು..

Doctor

12-03-2018

ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ತುಂಬು ಗರ್ಭಿಣಿಯ ಹೊಟ್ಟೆಯಲ್ಲಿಯೇ ಶಿಶು ಸಾವನ್ನಪ್ಪಿರುವ ದಾರುಣ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಸರ್ಕಾರಿ ಹಳೆ ಹೆರಿಗೆ ಆಸ್ಪತ್ರೆಯಲ್ಲಿ, ತ್ಯಾವಣಗಿಯ ರೇಣುಕಾ(22) ವೈದ್ಯರ ನಿರ್ಲಕ್ಷ್ಯಕ್ಕೊಳಗಾದ ಗರ್ಭಿಣಿ. ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದರೂ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಒಂದೂವರೆ ದಿನ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದರೂ ಹೆರಿಗೆ ಮಾಡಿಲ್ಲ, ಬಳಿಕ ನಿನ್ನೆ ಸಂಜೆ, ಸಿಜೇರಿಯನ್ ಮಾಡಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಹೊಟ್ಟೆಯಲ್ಲೇ ಶಿಶು ಮೃತಪಟ್ಟಿತ್ತು. ವೈದ್ಯರ ಬೇಜವಾಬ್ದಾರಿಗೆ ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡು, ಗಲಾಟೆ ಮಾಡಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಆಸ್ಪತ್ರೆ ಅಧೀಕ್ಷಕರಿಗೆ ರೇಣುಕಾ ಸಂಬಂಧಿಕರು ದೂರು ನೀಡಿದ್ದಾರೆ. ಅಧೀಕ್ಷಕರು ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆದರೆ ಹೋದ ಜೀವ ಬಂದೀತೇ..


ಸಂಬಂಧಿತ ಟ್ಯಾಗ್ಗಳು

Doctors pregnant ಅಧೀಕ್ಷಕ ತರಾಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ