ನಾಲ್ಕು ವರ್ಷದ ಚಿರತೆ ಸೆರೆ

Four-years old leopard caught in ramnagar

10-03-2018

ರಾಮನಗರ: ತಾಲ್ಲೂಕಿನ ಮುತ್ತುರಾಯನ ಪಾಳ್ಯದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 4ವರ್ಷದ ಚಿರತೆ ಸಿಕ್ಕಿದೆ. ಹಲವು ದಿನಗಳಿಂದ ಮುತ್ತುರಾಯನ ಪಾಳ್ಯದ ಸುತ್ತಮುತ್ತ ಜಾನುವಾರುಗಳನ್ನ ಬೇಟೆಯಾಡುತ್ತಿದ್ದ ಚಿರತೆ ಗ್ರಾಮದಲ್ಲಿ ಭಯ ಸೃಷ್ಟಿಸಿತ್ತು. ಗ್ರಾಮಸ್ಥರ ದೂರಿಗೆ ಸ್ಪಂದಿಸಿ ಅರಣ್ಯ ಇಲಾಖೆ ಬೋನು ಇಟ್ಟಿತ್ತು. ಅದರಂತೆ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ನಾಗೇಂದ್ರ ಭೇಟಿ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Leopard forest ಗ್ರಾಮಸ್ಥ ಅರಣ್ಯಾಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ