ತಂದೆಯಿಂದಲೇ ಮಗನ ಕೊಲೆ...

A Man killed his own son

10-03-2018 199

ಹಾಸನ: ಆಸ್ತಿ ವಿಚಾರಕ್ಕೆ ತಂದೆಯಿಂದಲೇ ಮಗನ ಬರ್ಬರ ಹತ್ಯೆಯಾಗಿದೆ. ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕರಗನ ಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಚಂದ್ರು (38) ಕೊಲೆಯಾದ ನತದೃಷ್ಟ ಮಗ. ರಾಜಣ್ಣ ಕೊಲೆಗೈದ ಆರೋಪಿ. ಮಚ್ಚು ಮತ್ತು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ಈ ಹಿಂದೆಯೂ ಕೊಲೆಮಾಡಿ ಜೈಲುಶಿಕ್ಷೆ ಅನುಭವಿಸಿದ್ದ ರಾಜಣ್ಣ, ಜೈಲಿಂದ ಬಿಡುಗಡೆಯಾಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ.  ಇತ್ತೀಚೆಗಷ್ಟೆ ತನ್ನ ಊರಿಗೆ ಬಂದು ಎರಡನೇ ಹೆಂಡತಿಯ ಮಗಳೊಂದಿಗೆ ವಾಸವಾಗಿದ್ದ.

ಇನ್ನು ಅಪ್ಪನ ಕಿರುಕುಳದಿಂದ ಬೇಸತ್ತಿದ್ದ ಮಗ ಚಂದ್ರು ಅತ್ತಿಚೌಡೇನಹಳ್ಳಿ ಗ್ರಾಮದಲ್ಲಿ ವ್ಯಾವಸಾಯ ಮತ್ತು ವ್ಯಾಪಾರ ಮಾಡಿಕೊಂಡಿದ್ದ. ಆದರೆ ಇಂದು ತೆಂಗಿನ ಕಾಯಿ ಕೆಡವಿದ ವಿಚಾರಕ್ಕೆ ಅಪ್ಪ-ಮಗನ ನಡುವಿನ ಜಗಳ ತಾರಕಕ್ಕೇರಿ ಜಗಳದಲ್ಲಿ ಮಗ ಚಂದ್ರು ಬರ್ಬರವಾಗಿ ಕೊಲೆಯಾಗಿದ್ದಾನೆ. ಕೊಲೆ ಬಳಿಕ ರಾಜಣ್ಣ ಪೊಲೀಸರಿಗೆ ಶರಣಾಗಿದ್ದಾನೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

murder security ಹೆಂಡತಿ ಬರ್ಬರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ