‘ಭದ್ರತಾ ಲೋಪ ಘಟನೆಗೆ ಕಾರಣ’

subhash adi ex upa lokayukta reaction on vishwanath shetty issue

10-03-2018

ಬಾಗಲಕೋಟೆ: ಲೋಕಾಯುಕ್ತ ಕಚೇರಿಗೆ ಸೂಕ್ತ ಭದ್ರತೆ ಇದ್ದಿದ್ದರೆ ಲೋಕಾಯುಕ್ತರ ಮೇಲೆ ಅಟ್ಯಾಕ್ ಆಗುತ್ತಿರಲಿಲ್ಲ ಎಂದು ನಿವೃತ್ತ ಉಪ ಲೋಕಾಯುಕ್ತ, ಸುಭಾಶ್ ಅಡಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಿದರೆ ಸಾಲದು, ಪರಿಣಿತ ಪೊಲೀಸರನ್ನು ನಿಯೋಜಿಸಬೇಕೆಂದು ಸಲಹೆ ನೀಡಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ ಹೆಚ್ಚಿನ ಸೆಕ್ಯೂರಿಟಿ ನೀಡಬೇಕಿದೆ. ಲೋಕಾಯುಕ್ತ ಸಂಸ್ಥೆಗಿಂತ, ಇತರೆ ಪ್ರಮುಖ ಸಂಸ್ಥೆಗಳ ಭದ್ರತೆಯನ್ನೂ ಕಡೆಗಣಿಸಿದೆ ಎಂದರು.

ಲೋಕಾಯುಕ್ತ ಸಂಸ್ಥೆ ಇರುವುದೇ ಜನರಿಗಾಗಿ, ಎಲ್ಲಾ ರೀತಿಯ ಜನರು ಲೋಕಾಯುಕ್ತರ ಬಳಿ ಬರುತ್ತಾರೆ, ಹಾಗಾಗಿ ಹೆಚ್ಚಿನ ಭದ್ರತೆಯ ಅವಶ್ಯಕತೆಯಿದೆ. ಲೋಕಾಯುಕ್ತರಿಂದ ಜನರನ್ನು ದೂರ ಇಟ್ಟರೆ ಅದರಿಂದ ದುಷ್ಪರಿಣಾಮಗಳೇ ಹೆಚ್ಚು. ಜನರಿಗೆ ಭೇಟಿ ಮಾಡಲು ಅವಕಾಶವೂ ಇರಬೇಕು ಎಂದು ಅಭಿಪ್ರಾಯಪಟ್ಟರು.


ಸಂಬಂಧಿತ ಟ್ಯಾಗ್ಗಳು

Subhash B. Adi Lokayukta ಭದ್ರತೆ ಹೈಕೋರ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ