ಎಟಿಎಂ ದರೋಡೆಗೆ ವಿಫಲ ಯತ್ನ

Attempted to atm machine robbery at mysore

10-03-2018

ಮೈಸೂರು: ನಗರದ ಹೃದಯಭಾಗದ ಕೆ.ಆರ್.ವೃತ್ತದ ಬಳಿ ಇರುವ ವಿಜಯಾ ಬ್ಯಾಂಕ್ ಎಟಿಎಂ ದೋಚಲು ಕಳ್ಳರು ವಿಫಲ ಯತ್ನ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಕೆ.ಆರ್.ವೃತ್ತದಲ್ಲಿರುವ ವಿಜಯಾ ಬ್ಯಾಂಕ್ ಎಟಿಎಂನ ಎದುರು ಇರುವ ಗೋಪಾಲ್ ವೆಜ್ ಆ್ಯಂಡ್ ನಾನ್ ವೆಜ್ ಹೋಟೆಲ್ ಮಾಲೀಕರು ಬೆಳಗಿನ ಜಾವ ತಮ್ಮ ಹೋಟೆಲ್ ಗೆ ಬಂದಾಗ ಎಟಿಎಂ ತೆರೆದಿರುವುದು ನೋಡಿ ಇದೇನು ಇಷ್ಟು ಬೇಗ ತೆರೆದಿದ್ದಾರೆ ಎಂದು ಹತ್ತಿರ ಹೋಗಿ ನೋಡಲಾಗಿ ಎಟಿಎಂ ಮೆಷಿನ್ ಕಳುವಿಗೆ ಕಳ್ಳರು ವಿಫಲ ಯತ್ನ ನಡೆಸಿರುವುದು ತಿಳಿದು ಬಂದಿದೆ. ತಕ್ಷಣ ದೇವರಾಜ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಬಂದು ಪರಿಶೀಲನೆ ನಡೆಸಿದೆ. ಸಿಸಿಬಿ ಎಸಿಪಿ ಲಿಂಗಪ್ಪ ಮತ್ತು ಬ್ಯಾಂಕಿನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ATM Machine ಹೃದಯ ಹೋಟೆಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ