ಕಾಂಗ್ರೆಸ್ ವಿರುದ್ಧ ಬಿಎಸ್ ವೈ ವಾಗ್ದಾಳಿ09-03-2018

ಬೆಂಗಳೂರು: ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ಗೂಂಡಾರಾಜ್ಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬಿಎಸ್ ಯಡಿಯೂರಪ್ಪ ಗಂಭೀರವಾಗಿ ಟೀಕಿಸಿದ್ದಾರೆ. ರಾಜ್ಯದಲ್ಲಿ 7748 ಕೊಲೆ, 9981 ದೌರ್ಜನ್ಯ, 7889 ಅತ್ಯಾಚಾರಗಳು ನಡೆದಿವೆ ಎಂದು ಮಾಹಿತಿ ನೀಡಿದ್ದಾರೆ. ಲೋಕಾಯುಕ್ತ ನ್ಯಾಯಾಮೂರ್ತಿಗಳ ಮೇಲೆ ನಡೆದ ಹಲ್ಲೆ ದೇಶದಾದ್ಯಂತ ಸುದ್ದಿಯಾಗಿ, ರಾಜ್ಯದ ಮರ್ಯಾದೆ ಹರಾಜಾಗಿದೆ. ಸಿಎಂ ಲೋಕಾಯುಕ್ತವನ್ನು ದುರ್ಬಲಗೊಳಿಸಿದ್ದಾರೆ, ಎಸಿಬಿ ರಚಿಸಿ ಅದರ ಮೂಲಕ ತಮ್ಮ ರಾಜಕೀಯ ವೈರಿಗಳನ್ನು ಮಟ್ಟ ಹಾಕಲು ಮುಂದಾದರು ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಆಡಳಿತ ನಡೆಸುವ ನೈತಿಕತೆಯನ್ನು ಕಳೆದುಕೊಂಡಿದೆ, ಕೂಡಲೇ ರಾಷ್ಟ್ರಪತಿ ಅಧಿಕಾರ ಜಾರಿಗೆ ಬರಬೇಕು ಎಂದು ಬಿ.ಎಸ್.ವೈ ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Yeddyurappa ACB ರಾಷ್ಟ್ರಪತಿ ಮರ್ಯಾದೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ