ದಯಾಮರಣಕ್ಕೆ ಸುಪ್ರೀಂ ಸಮ್ಮತಿ...

Supreme Court says passive euthanasia is permissible

09-03-2018

ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಚಿಂತಾಜನಕ ಸ್ಥಿತಿಯಲ್ಲಿರುವವರಿಗೆ  ಸುಪ್ರೀಂ ಕೋರ್ಟ್ ದಯಾ ಮರಣಕ್ಕೆ ಅವಕಾಶ ನೀಡುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ. ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪಂಚ ನ್ಯಾಯಾಧೀಶರ ನ್ಯಾಯಪೀಠ, ಈ ತೀರ್ಪು ನೀಡಿದ್ದು, ಸೂಕ್ತ ಮಾರ್ಗಸೂಚಿ ಮತ್ತು ಅಗತ್ಯ ಪ್ರಕ್ರಿಯೆಗಳ ಮೂಲಕ ದಯಾಮರಣಕ್ಕೆ ಅವಕಾಶ ಕಲ್ಪಿಸಬಹುದಾಗಿದೆ ಎಂದು ಹೇಳಿದೆ.

ಪಂಚನ್ಯಾಯ ಪೀಠದಲ್ಲಿ ಮುಖ್ಯನ್ಯಾಯಮೂರ್ತಿ ಅವರ ಜತೆಗೆ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರಿದ್ದರು. ದಯಾಮರಣಕ್ಕೆ ಒಳಗಾಗುವವರ ಆರೋಗ್ಯ ಪರಿಸ್ಥಿತಿ ಮತ್ತಿತರ ವಿವರಗಳನ್ನು ವೈದ್ಯಕೀಯ ಮಂಡಳಿ ಪರಿಶೀಲನೆ ನಡೆಸಿ ಒಪ್ಪಿಗೆ ಸೂಚಿಸಬೇಕಾಗುತ್ತದೆ. ಈ ಬಗ್ಗೆ ಕಾನೂನು ರೂಪಿಸುವವರೆಗೆ ಮಾರ್ಗಸೂಚಿ ಅಸ್ತಿತ್ವದಲ್ಲಿರುತ್ತದೆ ಎಂದು ಹೇಳಿದೆ.

ದಯಾಮರಣ ಬಯಸುವ ಮಹಿಳೆ ಅಥವಾ ಪುರುಷ ಜೀವ ರಕ್ಷಕ ಔಷಧಗಳಿಂದ ಬದುತ್ತಿದ್ದಾರೆಯೇ ಇಲ್ಲವೆ ಚಿಂತಾಜನಕ ಸ್ಥಿತಿಲ್ಲಿದ್ದಾರೆ ಎನ್ನುವುದನ್ನು ಸಹ ಪರಿಶೀಲಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ದಯಾಮರಣಕ್ಕೆ ಅವಕಾಶ ನೀಡುವ ಸಂಬಂಧ ಪಂಚ ನ್ಯಾಯಮೂರ್ತಿಗಳ ಪೀಠದಲ್ಲಿ ಸರ್ವ ಸಮ್ಮತ ಅಭಿಪ್ರಾಯ ಮೂಡಿದೆ ಎಂದು ಮುಖ್ಯನ್ಯಾಯಮೂರ್ತಿ ಅವರು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ