ಅಪಘಾತ: 3 ವಿದ್ಯಾರ್ಥಿನಿಯರ ದುರ್ಮರಣ

Accident: 3 students died

09-03-2018

ಬೆಂಗಳೂರು: ಹುಳಿಮಾವುವಿನ ಕೊಪ್ಪಗೆಟ್ ಬಳಿಯ ನೈಸ್ ರಸ್ತೆ ಬ್ರಿಡ್ಜ್ ಬಳಿ ವೇಗವಾಗಿ ಹೋಗುತ್ತಿದ್ದ ಫೋರ್ಡ್ ಫಿಗೊ ಕಾರು ಉರುಳಿ ಬಿದ್ದು ಮೂವರು ಬಿಬಿಎಂ ವಿದ್ಯಾರ್ಥಿನಿಯರು ಮೃತಪಟ್ಟು ಇಬ್ಬರು ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಮೃತಪಟ್ಟ ವಿದ್ಯಾರ್ಥಿನಿಯರನ್ನು ಎಲೆಕ್ಟ್ರಾನಿಕ್ ಸಿಟಿಯ ಅಲೆಯನ್ಸ್ ಕಾಲೇಜಿನಲ್ಲಿ 4ನೇ ಸೆಮಿಸ್ಟರ್ ಬಿಬಿಎಂ ಓದುತ್ತಿದ್ದ ಹರ್ಷ ಶ್ರೀವಾಸ್ತವ (24), ಆಶ್ರಯ (24) ಹಾಗೂ ಶ್ರುತಿ (24)ಎಂದು ಗುರುತಿಸಲಾಗಿದೆ.

ಕಾರು ಚಲಾಯಿಸಿದ್ದ ಪ್ರವೀಣ್(23)ಮತ್ತು ಪವಿತ್ ಕೊಹ್ಲಿ(23) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಹಾಗೂ ಗಾಯಾಳುಗಳು ಆಂಧ್ರ ಕೇರಳ ಹಾಗೂ ಜಾರ್ಖಂಡ್ ಮೂಲದವರಾಗಿದ್ದು, ಇವರೆಲ್ಲರೂ ಬೆಂಗಳೂರು ಹೊರವಲಯ ಅನೇಕಲ್ ಪಟ್ಟಣದ ಪ್ರತಿಷ್ಠಿತ ಅಲೆಯನ್ಸ್ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದರು.

ಝೂಮ್ ಸಂಸ್ಥೆಯ ಕಾರನ್ನು ಬಾಡಿಗೆಗೆ ಪಡೆದು ಔಟಿಂಗ್ ಹೋಗಿದ್ದ ಇವರೆಲ್ಲರೂ ಬೆಳಿಗ್ಗೆ 8ರ ವೇಳೆ ಕಾಲೇಜಿಗೆ ವಾಪಸ್ ತೆರಳುತ್ತಿದ್ದಾಗ ನೈಸ್ ರಸ್ತೆ ಬ್ರಿಡ್ಜ್ ಕೆಳಗೆ ವೇಗವಾಗಿ ಹೋಗುತ್ತ ಬಲಗಡೆ ತೆಗೆದುಕೊಂಡು ನಂತರ ಅದೇ ವೇಗದಲ್ಲಿ ಎಡಗಡೆ ತೆಗೆದುಕೊಂಡಾಗ ಆಯತಪ್ಪಿ ಉರುಳಿ ಬಿದ್ದ ಕಾರು, ಸುಮಾರು ದೂರ ಹೋಗಿ ಸೇತುವೆಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡು ಸಿಕ್ಕಿಹಾಕಿಕೊಂಡಿದ್ದ ಮೃತದೇಹಗಳನ್ನು ಕಟರ್ ಬಳಸಿ ಹೊರ ತೆಗೆಯಲಾಯಿತು. ಅಪಘಾತದಲ್ಲಿ ಹರ್ಷ ಶ್ರೀವಾಸ್ತವ ಮತ್ತು ಆಶ್ರಯ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಶ್ರುತಿ ಗೊಟ್ಟಿಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

Accident MBA ಸಂಪೂರ್ಣ ಫಲಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ