36 ಸ್ಥಳಗಳಲ್ಲಿ ಎಸಿಬಿ ಸಂಘಟಿದ ದಾಳಿ

ACB-organized attack in 36 places of karnataka

09-03-2018

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 9 ಭ್ರಷ್ಟ ಅಧಿಕಾರಿಗಳ ಮೇಲೆ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ರಾಜ್ಯದ ವಿವಿಧ 36 ಸ್ಥಳಗಳಲ್ಲಿ ಏಕ ಕಾಲಕ್ಕೆ ಸಂಘಟಿತ ದಾಳಿ ನಡೆಸಿ ಮಹತ್ವದ ದಾಖಲೆ ಪ್ರಕರಣಗಳನ್ನು ವಶಪಡಿಸಿಕೊಂಡಿದೆ. ಈ ಮೂಲಕ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮುಂದುವರೆಸಿರುವ ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ಅಧಿಕಾರಿಗಳು ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ಎಸಿಬಿಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಮಾತನಾಡಿ, ಈ ಅಧಿಕಾರಿಗಳು ಆದಾಯಕ್ಕೂ ಮೀರಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿಯನ್ನು ಹೊಂದಿರುವುದು ಪತ್ತೆಯಾಗಿದೆ ಅದನ್ನು ವಶ ತೆಗೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಬಿಬಿಎಂಪಿಯ ಘನತ್ಯಾಜ್ಯ ನಿರ್ವಾಹಣೆ ಅಭಿಯಂತರ ಆರ್.ಗಂಗಾಧರ್ ಬೆಂಗಳೂರಿನ ಕೆಜಿಐಡಿ ಯಲ್ಲಿ ಅಧೀಕ್ಷಕರಾಗಿರುವ ರುದ್ರ ಪ್ರಸಾದ್, ಬೆಳಗಾವಿಯ ಅಥಣಿಯ ಹಿಪ್ಪರಗಿ ಅಣೆಕಟ್ಟು ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ರಾಜಶ್ರೀ ಜೈನಾಪುರ, ಉಡುಪಿಯ ಅಬಕಾರಿ ಜಿಲ್ಲಾ ಉಪ ವರಿಷ್ಠಾಧಿಕಾರಿ ವಿನೋದ್ ಕುಮಾರ್, ಗಂಗಾವತಿಯ ಗ್ರಾಮೀಣ ಕುಡಿಯುವ ನೀರು ವಿಭಾಗದ ಸಹಾಯಕ ಅಭಿಯಂತರ ಪಿ. ವಿಜಯ್‍ಕುಮಾರ್, ಶ್ರೀನಿವಾಸಪುರದ ಸಹಾಯಕ ಅಭಿಯಂತರ ಎನ್. ಅಪ್ಪಿರೆಡ್ಡಿ, ಕಡೂರಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ವೈದ್ಯಕೀಯ ಅಧಿಕಾರಿ ಡಾ.ರಘುನಾಥ್ ಹಾಗೂ ಚಿಕ್ಕಮಗಳೂರಿನ ಆರ್.ಟಿ.ಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕೆ.ಸಿ.ವಿರೂಪಾಕ್ಷ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆದಿದೆ ಎಂದು ತಿಳಿಸಿದ್ದಾರೆ.

ಗಂಗಾಧರ್ ಅವರ ಬಸವನಗುಡಿಯ ಕಚೇರಿ, ನಂದಿನಿ ಲೇಔಟ್‍ನ ಮನೆ, ರುದ್ರ ಪ್ರಸಾದ್ ಅವರ ಬನಶಂಕರಿ, ಮಲ್ಲತಹಳ್ಳಿಯ ವಾಸದ ಮನೆ, ತುಮಕೂರಿನ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ವೈದ್ಯಕೀಯ ಅಧಿಕಾರಿ ಡಾ.ರಘುನಾಥ್ ಅವರ ಕುದೂರಿನ ಮನೆ, ಖಾಸಗಿ ಕ್ಲಿನಿಕ್, ಬಣವಾಡಿಯ ಪ್ರೈಮರಿಯ ಮೆಡಿಕಲ್ ಸೆಂಟರ್ ಮೇಲೆ ದಾಳಿ ನಡೆಸಲಾಗಿದ್ದರೆ, ಚಿಕ್ಕಮಗಳೂರಿನ ಆರ್‍ಟಿಓ ಎಸ್‍ಡಿಎ ವಿರೂಪಾಕ್ಷ ಅವರ ಕಚೇರಿ, ಚಿಕ್ಕಮಗಳೂರು, ಹೊಳೆನರಸೀಪುರ ಹಾಗೂ ಹಾಸನದಲ್ಲಿನ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಲೋಕ್ ಮೋಹನ್ ವಿವರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

corruption ACB DYSP ಲೋಕ್ ಮೋಹನ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ