‘ಸ್ವಇಚ್ಛೆಯಿಂದಲೇ ಮದುವೆ ಮಾಡಿಕೊಂಡಿದ್ದೇನೆ’09-03-2018

ಬೆಂಗಳೂರು: ಮನೆಯಿಂದ ಪರಾರಿಯಾಗಿ ಮೈಸೂರಿನಲ್ಲಿ ಗುರುವಾರ ಮದುವೆಯಾಗಿದ್ದ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ  ಲಕ್ಷ್ಮಿ ಎಸ್. ನಾಯ್ಕ್  ಸ್ವಇಚ್ಛೆಯಿಂದಲೇ ನಾನು ಮತ್ತು ನಿರ್ಮಾಪಕ ಸುಂದರ್ ಗೌಡ ವಿವಾಹವಾಗಿದ್ದೇವೆ ಎಂದು ಯಲಹಂಕ ಉಪನಗರ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

ಪತಿ ಸುಂದರ್ ಗೌಡ ಅವರೊಂದಿಗೆ ಠಾಣೆಗೆ ಆಗಮಿಸಿದ ಲಕ್ಷ್ಮಿ ಎಸ್.ನಾಯ್ಕ್ ತಾನು ಪರಾರಿಯಾಗಿಲ್ಲ, ಇಷ್ಟಪಟ್ಟ ಹುಡುಗನೊಂದಿಗೆ ಹೋಗಿದ್ದೆ. ನಾವಿಬ್ಬರೂ ಪ್ರಾಪ್ತ ವಯಸ್ಕರಾಗಿದ್ದೇವೆ ಪ್ರೀತಿಸಿ ಪರಸ್ಪರ ಇಬ್ಬರು ಒಪ್ಪಿ ಮದುವೆಯಾಗಿದ್ದೇವೆ ಎಂದು ಹೇಳಿಕೆ ಬರೆದುಕೊಟ್ಟಿದ್ದಾರೆ.

ಇದೇ ವೇಳೆ ಠಾಣೆಗೆ ಆಗಮಿಸಿದ್ದ ಲಕ್ಷ್ಮೀನಾಯ್ಕ್ ಅವರ ಅಜ್ಜಿಯನ್ನು ಪೊಲೀಸ್ ಠಾಣೆಯಿಂದಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಂದರ್ ಗೌಡನನ್ನು ಬಿಟ್ಟು ಬರುವಂತೆ ಸಾಕಷ್ಟು ಮನವೊಲಿಸುವ ಪ್ರಯತ್ನ ಮಾಡಿದಾಗ ಅವರ ಮಾತಿಗೆ ಒಪ್ಪದ ಲಕ್ಷ್ಮೀ, ನಾನು ಸುಂದರ್ ಗೌಡನನ್ನು ಬಿಟ್ಟು ಬರುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಅಳಲು ಆರಂಭಿಸಿದ ಲಕ್ಷ್ಮೀ ಅಜ್ಜಿ ಸ್ಥಳದಲ್ಲೇ ಅಸ್ವಸ್ಥಗೊಂಡರು.

ನನ್ನ ಮಗಳನ್ನು ಸುಂದರ್ ಗೌಡ ಹೇಗೆ ನೋಡಿಕೊಳ್ತಾನೆ? ಅವನಿಗೆ 36 ವರ್ಷ, ನನ್ನ ಮಗಳಿಗೆ ಇನ್ನೂ 23 ವರ್ಷ. ನನ್ನ ಮಗಳ ಹೆಸರಲ್ಲಿ 50 ಕೋಟಿ ರೂಪಾಯಿ ಆಸ್ತಿ ಪಾಸ್ತಿ ಇದೆ. ಸುಂದರ್ ಗೌಡ ಮಾಸ್ತಿಗುಡಿ ಕೇಸ್‍ನಲ್ಲಿ ಜೈಲಿಗೆ ಹೋಗಿ ಬಂದವನು. ಇವನು ಹೇಗೆ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಲಕ್ಷ್ಮಿ ತಾಯಿ ಡಾ.ಗೀತಾ ತಮ್ಮ ಆಪ್ತರ ಬಳಿ  ಕಣ್ಣೀರಿಟ್ಟಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ