ಸಂಪ್‍ಗೆ ಬಿದ್ದು 6ವರ್ಷದ ಮಗು ಸಾವು

6 years old girl died at sump: bengaluru

09-03-2018

ಬೆಂಗಳೂರು: ಹೆಗ್ಗನಹಳ್ಳಿಯ ಶ್ರೀಗಂಧ ನಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಬಾಲಕಿ ತೆರೆದ ಸಂಪ್‍ಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತಪಟ್ಟ ಬಾಲಕಿಯನ್ನು ಶ್ರೀಗಂಧ ನಗರದ ಅಂಜಲಿ ದೇವರಾಜ್ ದಂಪತಿಯ ಪುತ್ರಿ ಹರಿಪ್ರಿಯ ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ 8.30ರ ವೇಳೆ ಈ ದುರ್ಘಟನೆ ಸಂಭವಿಸಿದೆ. ಹರಿಪ್ರಿಯ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಪಕ್ಕದ ಮನೆಯ ಮಹಿಳೆಯೊಬ್ಬರು ಸಂಪ್‍ನ್ನು ತೆರೆದು ನೀರು ತುಂಬಿಕೊಂಡು ಸಂಪ್‍ನ ಮುಚ್ಚಳ ಮುಚ್ಚದೆ ಹೋಗಿದ್ದರು. ಮತ್ತೊಂದು ಬಾರಿ ನೀರು ತುಂಬಿಕೊಳ್ಳಲು ಬರುವಷ್ಟರಲ್ಲಿ ಹರಿಪ್ರಿಯ ಸಂಪಿಗೆ ಬಿದ್ದಿದ್ದಾಳೆ. ಮಹಿಳೆ ಬಂದು ನೋಡಿ ಬಾಲಕಿಯನ್ನು ಮೇಲೆತ್ತಲು ಕೂಗಿಕೊಳ್ಳುವಷ್ಟರಲ್ಲಿ ನೀರು ಕುಡಿದು ಆಳದಲ್ಲಿ ಮುಳುಗಿ ಮೃತಪಟ್ಟಿತ್ತು. ಪ್ರಕರಣ ದಾಖಲಿಸಿರುವ ರಾಜಗೋಪಾಲನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 

 

 

 


ಸಂಬಂಧಿತ ಟ್ಯಾಗ್ಗಳು

water sump death ಪ್ರಕರಣ ಬಾಲಕಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ