'ಕಮ್ ಬ್ಯಾಕ್ ಟು ಪವರ್ ಅನ್ನೋದೇ ನಮ್ಮ ಮಂತ್ರ'

k.c.venugopal meeting at kpcc office

09-03-2018

ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಗರಂ ಆಗಿದ್ದಾರೆ. ಕ್ಷೇತ್ರವಾರು ಜವಾಬ್ದಾರಿ ನಿರ್ವಹಿಸುವಲ್ಲಿ ಪದಾಧಿಕಾರಿಗಳು ವಿಫಲವಾದ ಹಿನ್ನೆಲೆ ಅಸಮಾಧಾನಗೊಂಡಿದ್ದಾರೆ. ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ರಿಪೋರ್ಟ್ ನನ್ನ ಬಳಿ ಇದೆ, ಯಾರು ಎಷ್ಟರಮಟ್ಟಿಗೆ ಪಕ್ಷ ಸಂಘಟನೆ ಮಾಡಿದ್ದೀರ ಅನ್ನೋ ಮಾಹಿತಿ ಇದೆ. ‘ಮನೆ ಮನೆಗೆ ಕಾಂಗ್ರೆಸ್’ ಒಂದು ಅದ್ಭುತ ಸಂಘಟನಾ ಕಾರ್ಯಕ್ರಮ, ಅದನ್ನು ಸಹ ಹಲವು ಕ್ಷೇತ್ರಗಳಲ್ಲಿ ಸರಿಯಾಗಿ ನಿರ್ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚುನಾವಣೆಗೆ ಇನ್ನೂ ಎರಡು ತಿಂಗಳು ಸಮಯ ಇದೆ ಅನ್ನೋದು ಬೇಡ, ಪ್ರತಿದಿನವೂ ಚುನಾವಣೆ ಅನ್ನೋದು ನಿಮ್ಮ ಮನಸ್ಸಿಗೆ ಬರಲಿ. ಬಿಜೆಪಿಯವರು ಹೇಳುವ ಸುಳ್ಳುಗಳ ಬಗ್ಗೆ ಬೂತ್ ಮಟ್ಟದಲ್ಲಿ ಜನರಿಗೆ ಅರ್ಥ ಮಾಡಿಸಬೇಕು. ನಮ್ಮ ಸರ್ಕಾರದ ಸಾಧನೆಗಳನ್ನ ಮನೆ ಮನೆಗೆ ತಿಳಿಸಿ ಎಂದು ತಾಕೀತು ಮಾಡಿದ್ದಾರೆ. ಪ್ರತಿ ಹದಿನೈದು ದಿನಕೊಮ್ಮೆ ನಮಗೆ ಪದಾಧಿಕಾರಿಗಳ ಬಗ್ಗೆ ಮಾಹಿತಿ ಬರುತ್ತದೆ, ಎಚ್ಚರಿಕೆಯಿಂದ ಕೆಲಸ ಮಾಡಿ. ಕಮ್ ಬ್ಯಾಕ್ ಟು ಪವರ್ ಅನ್ನೋದೇ ನಮ್ಮ ಮಂತ್ರವಾಗಲಿ ಎಂದು ಪದಾಧಿಕಾರಿಗಳ ಸಭೆಯಲ್ಲಿ ವೇಣುಗೋಪಾಲ್ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

K.C.Venugopal KPCC ಪದಾಧಿಕಾರಿ ಪ್ರತಿದಿನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ