ರಾಜ್ಯದ ವಿವಿಧೆಡೆ ಎಸಿಬಿ ದಾಳಿ

ACB attack on different parts of the state

09-03-2018

ತುಮಕೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತಿಪಟೂರಿನ ವಿದ್ಯಾನಗರದಲ್ಲಿರುವ ಮನೆ ಸೇರಿದಂತೆ ಕಚೇರಿ ಮೇಲೆ ಎಸಿಬಿ ಡಿವೈಎಸ್ಪಿ ಮೋಹನ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಕೊಪ್ಪಳದಲ್ಲೂ ಎಸಿಬಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಗಂಗಾವತಿ ಜಿಲ್ಲಾ ಪಂಚಾಯತಿ ಉಪ ವಿಭಾಗೀಯ ಕಚೇರಿಯ ಎ.ಇ.ಇ.ವಿಜಯಕುಮಾರ್ ಮನೆ ಹಾಗು ಕಚೇರಿ ಮೇಲೆ ದಾಳಿ ಮಾಡಿದ ಸುಮಾರು 20 ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಆಸ್ತಿಗಳಿಕೆ ಆರೋಪದಡಿ, ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎಇಇ ಅಪ್ಪಿರೆಡ್ಡಿಗೆ ಸಂಬಂಧಿಸಿದ, ಶ್ರೀನಿವಾಸಪುರ ಜಾಕೀರ್ ಹುಸೇನ್ ಬಡಾವಣೆಯ ‌ಮನೆ ಹಾಗೂ ಅವರಿಗೆ ಸೇರಿದ ಐದು ಕಡೆ ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆದಿದೆ. ಎಸಿಬಿ ಡಿವೈಎಸ್ಪಿ ಮೋಹನ್ ಹಾಗೂ ಇನ್ಸ್ಪೆಕ್ಟರ್ ರಂಗಸ್ವಾಮಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

ACB corruption ಡಿವೈಎಸ್ಪಿ ಸಹಾಯಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ