ನೌಕರರಿಂದ ಕಂಪನಿಗೆ ಪಂಗನಾಮ

lakhs of money fraude by workers in a company

09-03-2018

ಚಿಕ್ಕಮಗಳೂರು: ಶೋಕಿಗಾಗಿ ಪ್ರತಿಷ್ಠಿತ ಆನ್ ಲೈನ್ ಮಾರಾಟ ಸಂಸ್ಥೆಗೆ ಕಂಪನಿಯ ನೌಕರರೇ ದೋಖಾ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಮೋಸ ಮಾಡಿರುವ ಐವರು ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಘಟನೆ ನಡೆದಿದೆ. ಗ್ರಾಹಕರ‌ ಹಣವನ್ನ ಕಂಪನಿಗೆ ನೀಡದೆ ವಂಚನೆ ಎಸಗಿದ್ದಾರೆ. ಕಾಳಿದಾಸ ನಗರದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರ ಬಳಿ ಇದ್ದ ಬೆಲೆ ಬಾಳುವ ವಸ್ತುಗಳನ್ನು ಕಂಡು ದಂಗಾಗಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆ‌‌ಬಾಳುವ ವಸ್ತುಗಳನ್ನ‌ ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ನಗರ ಮತ್ತು ಬಸವನಹಳ್ಳಿ‌ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ವಂಚನೆ ಬಯಲಿಗೆಳೆದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

online sellers ಗ್ರಾಹಕರ‌ ಪ್ರತಿಷ್ಠಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ