ಪೊಲೀಸರ ಅತಿಥಿಯಾದ ದೇವರ ಹುಂಡಿ ಕಳ್ಳ

Kannada News

09-05-2017

ಬಳ್ಳಾರಿ : ದೇವಸ್ಥಾನದಲ್ಲಿನ ಹುಂಡಿಯನ್ನು ಮುರಿದು ಹಣ ದೋಚಿಕೊಂಡು ಹೋಗಲು ಮುಂದಾಗಿದ್ದ ಕಳ್ಳ ಜನರ ಕೈಗೆ ಸಿಕ್ಕಿ ಗೂಸ ತಿಂದು. ಪೊಲೀಸರ ಅತಿಥಿಯಗಿದ್ದಾನೆ. ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರದ ಗ್ರಾಮದ ಗಂಡಿಮಲಿಯಮ್ಮನ ದೇವಸ್ಥಾನದಲ್ಲಿ ನಿನ್ನೆ ತಡ ರಾತ್ರಿ ಅದೇ ಗ್ರಾಮದ ಅಗಸರ ಮಲ್ಲೇ (26) ಹುಂಡಿಯ ಕೀಲಿ ಮುರಿದು ಅದರಲ್ಲಿನ ಹಣ ದೋಚಲು ಮುಂದಾಗಿದ್ದ . ಇದನ್ನು ನೋಡಿದ ಗ್ರಾಮದ ಜನತೆ ಅವನನ್ನು ಹಿಡಿದು ಅದೇ ದೇವಸ್ಥಾನದ ಮುಂದಿನ ವಿದ್ಯುತ್ ಕಂಬಕ್ಕೆ ಕಟ್ಟಿ ಗೂಸ ನೀಡಿದ್ದಾರೆ. ನಂತರ ಆತನನ್ನು ಸಂಡೂರು  ಪೋಲಿಸರಿಗೆ ಒಪ್ಪಿಸಿದ್ದಾರೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ