ಬೆಂಕಿಗೆ ಸಿಲುಕಿ ರೈತ ಸಾವು

unfortunately farmer died in fire..

08-03-2018

ಬೆಂಗಳೂರು: ನಗರದ ಹೊರವಲಯದ ಬಿಡದಿಯ ಕೋಡಿಯಾಲದಲ್ಲಿ ರಾಗಿ ಬಣವೆಗೆ ಬಿದ್ದ ಬೆಂಕಿಯನ್ನ ನಂದಿಸಲು ಹೋದ ರೈತರೊಬ್ಬರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾದ ದಾರುಣ ಘಟನೆ ನಡೆದಿದೆ. ಕೋಡಿಯಾಲ ಗ್ರಾಮದ ಕೆಂಪಯ್ಯ ಮೃತ ದುರ್ದೈವಿಯಾಗಿದ್ದಾರೆ. ಕೋಡಿಯಾಲದಲ್ಲಿ ರೈತ ಲಕ್ಷ್ಮಿ ನಾರಾಯಣ ಎಂಬವರು ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ರಾಗಿಯನ್ನ ಒಕ್ಕಣೆ ಮಾಡಿ ಮೆದೆ ಹಾಕಿದ್ದರು.

ಮಧ್ಯಾಹ್ನದ ವೇಳೆ  ರಾಗಿ ಮೆದೆಗೆ ಬೆಂಕಿ ಬಿದ್ದಿತ್ತು. ಈ ವೇಳೆ ಜಮೀನಿನ ಕಡೆ ಹೋಗಿದ್ದ ಕೆಂಪಯ್ಯ, ಬೆಂಕಿ ಕಂಡು ನಂದಿಸಲು ಮುಂದಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹಾಗೂ ಹೊಗೆಯ ನಡುವೆ ಸಿಲುಕಿದ ಕೆಂಪಯ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಎರಡು ರಾಗಿ ಮೆದೆಗಳು ಭಸ್ಮವಾಗಿದ್ದು ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಆಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು ಬಿಡದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Farmer death ಪ್ರಕರಣ ಆಗ್ನಿ ಶಾಮಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ