‘ವಿಶ್ವನಾಥ್ ಶೆಟ್ಟಿ ಆರೋಗ್ಯದಲ್ಲಿ ಚೇತರಿಕೆ’

Vishwanath Shetty recovering slightly- said doctors

08-03-2018

ಬೆಂಗಳೂರು: ಹತ್ಯೆ ಯತ್ನಕ್ಕೊಳಗಾಗಿರುವ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಚೇತರಿಸಿಕೊಳ್ಳುತ್ತಿದ್ದು ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ಮಲ್ಯ ಆಸ್ಪತ್ರೆ ವೈದ್ಯ ದಿವಾಕರ್ ಭಟ್ ತಿಳಿಸಿದ್ದಾರೆ.

ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ಲೋಕಾಯುಕ್ತರಿಗೆ ತಕ್ಷಣ ಶಸ್ತ್ರಚಿಕಿತ್ಸೆ ನೀಡಲಾಗಿದೆ. ಎದೆ ಭಾಗಕ್ಕೆ ಮೂರು, ತೊಡೆಗೆ ಮತ್ತು ಹೊಟ್ಟೆ ಭಾಗದಲ್ಲಿ ತಲಾ ಒಂದು ಇರಿತವಾಗಿದೆ. ಕೈ ಹಾಗೂ ಎಡ ಎದೆ ಭಾಗದಲ್ಲೂ ಗಾಯಗಳಾಗಿವೆ. ಹೀಗಾಗಿ ಸತತ ಮೂರು ಗಂಟೆಗಳ ಕಾಲ ಶಸ್ತ್ರಉಚಿಕಿತ್ಸೆ ನಡೆಸಲಾಗಿದ್ದು, ಸರ್ಜರಿ ನಡೆಸಿ ರಕ್ತಸ್ರಾವ ತಡೆಯಲಾಗಿದೆ ಎಂದು ಹೇಳಿದರು.

ಅಲ್ಲದೇ, ಬೈಪಾಸ್ ಸರ್ಜರಿ ನಡೆದಿರುವ ಕಾರಣ ಚಾಕುವಿನ ಇರಿತದಿಂದ ಹೆಚ್ಚಿನ ತೊಂದರೆ ಉಂಟಾಗಿದೆ. 74 ವರ್ಷ ಆಗಿರುವುದರಿಂದ ತೀರಾ ನೋವು ತಡೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಅವರಿಗೆ ಡಯಾಬಿಟಿಸ್ ಕೂಡ ಇದೆ. ಹೀಗಾಗಿ ನಾಲ್ಕೈದು ದಿನಗಳ ಕಾಲ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Vishwanath Shetty Lokayukta ಬೈಪಾಸ್ ಸರ್ಜರಿ ಐಸಿಯು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ