ಬಾಲ್ಯ ವಿವಾಹಗಳಿಗೆ ಇಲ್ಲವೆ ಕಡಿವಾಣ?

There is some villages have child marriages still

08-03-2018

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಗ್ರಾಮವೊಂದು ಬಾಲ್ಯ ವಿವಾಹದಿಂದ ಅಪಖ್ಯಾತಿಗೆ ಒಳಗಾಗುತ್ತಿದೆ. ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ತಮ್ಮೇನಹ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋನಾಪುರ ಗ್ರಾಮದಲ್ಲಿ ಹೆಚ್ಚಿನ ಬಾಲ್ಯ ವಿವಾಹಗಳು ಮತ್ತು ಅಪ್ರಾಪ್ತರಿಗೂ ಮದುವೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 2015ರಿಂದಲೂ ಅತಿ ಹೆಚ್ಚು ಚೈಲ್ಡ್ ಮ್ಯಾರೇಜ್ ಪ್ರಕರಣಗಳು ದಾಖಲಾಗಿವೆ. ಕೋನಾಪುರ ಗ್ರಾಮ ಅಪ್ರಾಪ್ತ ಬಾಲಕಿಯರ ಮದುವೆ ತಾಣವಾಗುತ್ತಿದೆ ಎಂದರೆ ತಪ್ಪಾಗಲಾರದು. ಅಧಿಕಾರಿಗಳಿಗೂ ಚಳ್ಳೇಹಣ್ಣು ತಿನ್ನಿಸಿ ಮಕ್ಕಳಿಗೆ ಮದುವೆ ಮಾಡುತ್ತಿದ್ದಾರೆ ಗ್ರಾಮಸ್ಥರು. ಈ ವಿವಾಹಗಳನ್ನು ತಡೆಯುವುದು ಕಷ್ಟವಾಗುತ್ತಿದ್ದು, ಗ್ರಾಮಸ್ಥರಿಗೆ ಅರಿವು ಮೂಡಿಸುವಲ್ಲಿ ಜಿಲ್ಲಾಡಳಿತ ಹಿಂದೆ ಬಿದ್ದಿದೆ ಎಂಬ ಆರೋಪಗಳು ಕೇಳಿ ಬಂದಿವೆ.


ಸಂಬಂಧಿತ ಟ್ಯಾಗ್ಗಳು

child marriage Ammature marriage ಮದುವೆ ಜಿಲ್ಲಾಡಳಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ