ಡಿಸಿಪಿ ಚಂದ್ರಗುಪ್ತರಿಂದ ತೇಜ್‌ರಾಜ್‌ ತೀವ್ರ ವಿಚಾರಣೆ...

DCP chandragupta enquiring tej raj

07-03-2018

ಬೆಂಗಳೂರು: ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿಗೆ ಚಾಕು ಇರಿತ ಪ್ರಕರಣದ ಆರೋಪಿ ತೇಜ್‌ ರಾಜ್‌ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ.ಸಿಂಗ್‌ ಮತ್ತು ಡಿಸಿಪಿ ಚಂದ್ರಗುಪ್ತರಿಂದ ಆರೋಪಿಯ ವಿಚಾರಣೆ ನಡೆಸಲಾಗಿದೆ.

ವಿಚಾರಣೆ ವೇಳೆ, ಲೋಕಾಯುಕ್ತರ ಜತೆ ತಾನು ಕೊಟ್ಟ ದೂರುಗಳ ಬಗ್ಗೆ 5 ನಿಮಿಷ ಚರ್ಚಿಸಿದೆ. ಸಾಕಷ್ಟು ಸಾಕ್ಷಿ ಒದಗಿಸಿದರೂ ದೂರನ್ನು ವಜಾ ಮಾಡಿದ ಹಿನ್ನೆಲೆ ಕುರಿತು ಅವರನ್ನು ಪ್ರಶ್ನಿಸಿದೆ ಇವೆಲ್ಲವಕ್ಕೂ ವಿಶ್ವನಾಥ ಶೆಟ್ಟಿ ಅವರು ನಗುತ್ತ ನಗುತ್ತ ಉತ್ತರ ಕೊಡುತ್ತಿದ್ದರು. ಎಷ್ಟೇ ದೂರು ಕೊಟ್ಟರೂ ಭ್ರಷ್ಟರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಚಾಕು ಇರಿದಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.

ಲೋಕಾಯುಕ್ತ ಕಚೇರಿಗೆ ಆಗಮಿಸಿದ ಎಫ್‌ಎಸ್‌ಎಲ್‌ ತಂಡ ಸತತ 40 ನಿಮಿಷಗಳಿಂದ ತಪಾಸಣೆ ನಡೆಸಿದೆ. ಲೋಕಾಯುಕ್ತರ ಖುರ್ಚಿ, ತೇಜರಾಜ್‌ ಕುಳಿತ ಕುರ್ಚಿಗಳ ಕುರಿತು ತಪಾಸಣೆ ನಡೆಸಿದ್ದಾರೆ. ಲೋಕಾಯುಕ್ತ ಕಚೇರಿಯ ಬಾಗಿಲು, ಬಿದ್ದಿರುವ ರಕ್ತದ ಕಲೆಗಳು, ಟೇಬಲ್‌ ಮೇಲಿರುವ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕು ಲೋಕಾಯುಕ್ತ ಕಚೇರಿಯಲ್ಲೇ ಇತ್ತು. ಚಾಕುವನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಲೋಕಾಯುಕ್ತಕ್ಕೆ ಹೆಚ್ಚಿನ ಭದ್ರತೆ ನೀಡುವಂತೆ ಉಪಲೋಕಾಯುಕ್ತ ಸುಭಾಷ್‌ ಅಡಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸರ್ಕಾರ ಕ್ಯಾರೆ ಎಂದಿರಲಿಲ್ಲ. ಈ ಹಿಂದೆ ಬೆಂಕಿ ಹಾಕಿದ್ದಾಗಲೂ ಕೂಡ ಹೆಚ್ಚಿನ ಭದ್ರತೆಗೆ ಮನವಿ ಮಾಡಿದ್ದರೂ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸಿತ್ತು ಎನ್ನಲಾಗಿದೆ.

ಯಾರೀತ ತೇಜ್‌ರಾಜ್‌?

ತೇಜ್‌ರಾಜ್‌ ಶರ್ಮಾ ಮೂಲತಃ ರಾಜಸ್ಥಾನದ ಕುಟುಂಬದವನು. ಶರ್ಮಾ ತಂದೆ ತುಮಕೂರಿನ ತಿಪಟೂರಿನಲ್ಲಿ ನೆಲೆಸಿದ್ದರು. ಸರ್ಕಾರಿ ಅಧಿಕಾರಿಗಳ ವಿರುದ್ಧ ತೇಜ್‌ರಾಜ್‌ ದೂರು ನೀಡುತ್ತಿದ್ದ. ಆದರೆ, ಬಹುತೇಕ ದೂರುಗಳು ಕ್ಲೋಸ್ ಆಗಿದ್ದವು. ತೇಜಸ್ ರಾಜ್ ಶರ್ಮಾ ಪರವಾಗಿ ಲೋಕಾಯುಕ್ತ ತೀರ್ಪು ಬಂದಿರಲಿಲ್ಲ. ಅಂಬೆಕೃಪಾ  ಮಾರ್ಕೆಟರ್ಸ್‌ ಹೆಸರಿನಲ್ಲಿ ಸರ್ಕಾರಿ ಕಚೇರಿಯಲ್ಲಿ ಫರ್ನೀಚರ್ ಸರಬರಾಜು ಮಾಡ್ತಿದ್ದ ಆರೋಪಿಗೆ ಇತ್ತೀಚೆಗೆ ಸರ್ಕಾರಿ ಕಚೇರಿಯಿಂದ ಟೆಂಡರ್ ಸಿಕ್ಕಿರಲಿಲ್ಲ. ಈ ಕುರಿತು 18 ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ. ಇದೇ ವಿಚಾರಕ್ಕೆ ಲೋಕಾಯುಕ್ತಕ್ಕೆ ಬಂದಿದ್ದ. ಮಹಿಳಾ ಆಯೋಗ, ಹಣಕಾಸು ಇಲಾಖೆ, ಶಿಕ್ಷಣ, ಆಹಾರದ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ವಂಚನೆ ಆಗುತ್ತಿದೆ. 4 ಕೋಟಿ ರೂ. ಹಗರಣ ನಡೆದಿದೆ ಎಂದು ದೇವರಾಜು, ಮಹಾಲಿಂಗಪ್ಪ, ಮಂಜುನಾಥ್‌, ಶಿವಕುಮಾರ್‌, ಡಾ.ಚಂದ್ರಪ್ಪ, ಎ.ಆರ್‌. ಚಂದ್ರಶೇಖರ್‌, ಪ್ರಭಾಕರ್‌ ಮತ್ತು ಕುಮಾರ್‌ ಎಂಬವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ.

ಇತ್ತೀಚೆಗಷ್ಟೇ ತುಮಕೂರು ರೇಷ್ಮೆ ಇಲಾಖೆಯಲ್ಲಿನ ಹಗರಣದ ಬಗ್ಗೆ ದೂರು ನೀಡಿದ್ದ ತೇಜರಾಜ್‌ ಶರ್ಮಾ, ಅದರಲ್ಲಿ ನ್ಯಾಯ ಸಿಗುವ ವಿಶ್ವಾಸ ಹೊಂದಿದ್ದ. ಇದುವರೆಗೂ ತೇಜಸ್ ಆರ್ ಎನ್ನುವ ಹೆಸರಿನಲ್ಲಿ 5 ದೂರು ದಾಖಲಿಸಿದ್ದ. ಇನ್ನು ತುಮಕೂರಿನ ಬಿದಿರುಮಳೆ ತೋಟದಲ್ಲಿ ವಾಸವಿದ್ದ ಆರೋಪಿ ತೇಜ್‌ರಾಜ್‌ ಮನೆಗೆ ಎಸ್​ಪಿ ದಿವ್ಯಾ ಗೋಪಿನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ