'ಲೋಕಾಯುಕ್ತರ ಮೇಲಿನ ‌ದಾಳಿ ಅತ್ಯಂತ ಕೆಟ್ಟ ಘಟನೆ'07-03-2018

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಮೇಲಿನ ‌ದಾಳಿ ಅತ್ಯಂತ ಕೆಟ್ಟ ಘಟನೆ, ಕಚೇರಿಗೇ ನುಗ್ಗಿ ಅಮಾನುಷವಾಗಿ ಇರಿದಿದ್ದು ಅಮಾನವೀಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರಿಗಳ ಮೇಲೆ ದಾಳಿ ಯಂತಹ ಘಟನೆಗಳು ನಡೆಯುತ್ತಿದ್ದವು, ಈಗ ನ್ಯಾಯಾಧೀಶರ ಮೇಲೆಯೇ ದಾಳಿ ನಡೆದಿದೆ. ಪೋಲಿಸ್ ಅಧಿಕಾರಿಗಳ ಮನೆಗೆ ನುಗ್ಗಿ ಕಳ್ಳತನ ಮಾಡಿದ ಘಟನೆಗಳೂ ನಡೆದಿವೆ. ಯಾರಿಗೆ ಏನು ಬೇಕಾದರೂ ಮಾಡಿ ತಪ್ಪಿಸಿಕೊಳ್ಳಬಹುದು ಅನ್ನೋ ಭಾವನೆ ಮೂಡಿದೆ. ಇದರ ಸಂಪೂರ್ಣ ಹೊಣೆ ಮುಖ್ಯಮಂತ್ರಿಗಳೇ ಹೊರಬೇಕು, ಅವರ ತಲೆದಂಡ ಆದರೂ ಒಳ್ಳೆಯದು ಎಂದು ಪರೋಕ್ಷವಾಗಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿದರು. ಐದಾರು ತಿಂಗಳ ಹಿಂದೆಯೇ ರಾಷ್ಟ್ರಪತಿ ಆಳ್ವಿಕೆ ಆಗಬೇಕಿತ್ತು, ರಾಜ್ಯದಲ್ಲಿ ಇಂತಹ ಪರಿಸ್ಥಿತಿಗೆ ಕಾಂಗ್ರೆಸ್ ಜೊತೆಗೆ ಬಿಜೆಪಿಯೂ ಕಾರಣ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ