ಕಾಡಾನೆಗೆ ವ್ಯಕ್ತಿ ಬಲಿ

A man died because wild elephant

07-03-2018

ಮಂಗಳೂರು: ಮಲಗಿದ್ದವರ ಮೇಲೆ ಕಾಡಾನೆ ನಡೆದುಕೊಂಡು ಹೋದ ಪರಿಣಾಮ ಮೂವರರಲ್ಲಿ  ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೊಂಬಾರು ಬಳಿ ಘಟನೆ ನಡೆದಿದೆ. ತಮಿಳುನಾಡು ಮೂಲದ ರಂಜಿತ್ ಕುಮಾರ್(48) ಮೃತ ದುರ್ದೈವಿ. ಷಣ್ಮುಗಂ ಮತ್ತು ಲಕ್ಷ್ಮಣ್ ಗಾಯಾಳುಗಳು. ರೈಲ್ವೇ ಬ್ರಿಡ್ಜ್ ಕಾಮಗಾರಿ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರು ಶೆಡ್ ಇದ್ದರೂ ಹೊರಗಡೆ ಮಲಗಿದ್ದರು, ಈ ವೇಳೆ ದುರ್ಘಟನೆ ಸಂಭವಿಸಿದೆ. ಶಿರಾಡಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

elephant death ತಮಿಳುನಾಡು ಕಾರ್ಮಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ