ರೈತರಿಗೆ ಬ್ಲಾಕ್ ಮೇಲ್ ಮಾಡಬೇಡಿ...

Do not blackmail farmers ...

07-03-2018

ಗದಗ: ಮಹದಾಯಿ ನೀರಿಗಾಗಿ ನಡಯುತ್ತಿರುವ ಹೋರಾಟ 968ನೇ ದಿನಕ್ಕೆ ಕಾಲಿಟ್ಟಿದ್ದು, ನರಗುಂದ ಪಟ್ಟಣದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ವಿರುದ್ಧ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ.ರವೀಂದ್ರ ವಾಗ್ದಾಳಿ ನಡೆಸಿದ್ದಾರೆ. ಮಹದಾಯಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಈ ದೇಶದ ಒಂದು ಭಾಗ ಹೌದಾ ಅಲ್ವಾ? ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು, ಈ ವಿಚಾರವನ್ನು ಪ್ರಧಾನಿ ಮೋದಿ ಗಂಭೀರವಾಗಿ ತಗೆದುಕೊಳ್ಳಬೇಕು, ನ್ಯಾಯಾಧಿಕರಣದ ಹೊರಗೆ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದು ಡಾ.ರವೀಂದ್ರ ಆಗ್ರಹಿಸಿದ್ದಾರೆ.

ಪ್ರಧಾನಿ ಮೋದಿಯವರಷ್ಟೇ ಜವಾಬ್ದಾರಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಇದೆ. ಒಂದು ವೇಳೆ ಮಹದಾಯಿ ನದಿ ನೀರು ಹಂಚಿಕೆ ಸೂತ್ರವನ್ನು ಗೋವಾ, ಮಹಾರಾಷ್ಟ್ರ ರಾಜ್ಯಸರ್ಕಾರಗಳು ಒಪ್ಪಿದರೆ, ಆ ರಾಜ್ಯಗಳ ಕಾಂಗ್ರೆಸ್ ಮುಖಂಡರು ವಿರೋಧಿಸದಂತೆ ರಾಹುಲ್ ಗಾಂಧಿ ಅವರು ನೋಡಿಕೊಳ್ಳಬೇಕು ಎಂದರು. ಮೊದಲು ನೀರು ಕೊಟ್ಟು ಆ ನಂತರ ರಾಜಕಾರಣ ಮಾಡಿ, ಚುನಾವಣೆ ಸಂದರ್ಭದಲ್ಲಿ ರೈತರಿಗೆ ಬ್ಲಾಕ್ ಮೇಲ್ ಮಾಡಬೇಡಿ ಎಂದು ರಾಜಕೀಯ ಪಕ್ಷಗಳ ವಿರುದ್ಧ ಡಾ.ರವೀಂದ್ರ ಹರಿಹಾಯ್ದರು.


ಸಂಬಂಧಿತ ಟ್ಯಾಗ್ಗಳು

Rahul gandhi Political party ಬ್ಲಾಕ್ ಮೇಲ್ ಎಐಸಿಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ