ರಾಜ್ಯ ಬಿಜೆಪಿ ಮುಖಂಡರಿಗೆ ಕಿಮ್ಮತ್ತಿದೆಯೇ?07-03-2018

ಬೀದರ್: ಪ್ರಧಾನಿ ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ್, ಇವರೇ ಕರ್ನಾಟಕ ಬಿಜೆಪಿ ಮುಖಂಡರು. ರಾಜ್ಯದ ಬಿಜೆಪಿ ಮುಖಂಡರಿಗೆ ಯಾವುದೇ, ಕಿಮ್ಮತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಯಾಕೆ ಮುಂದೆ ತರುತ್ತಿಲ್ಲ ಅಂದರೆ ಪಾಪ ಅವರ ಮೇಲೆ ಆರೋಪಗಳಿವೆ, ಅವರೊಂದಿಗೆ ಜನರ ಮುಂದೆ ಹೋದರೆ ಜನ ಓಟ್ ಹಾಕಲ್ಲ ಎಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅನಾಹುತಗಳನ್ನು ಸರಿ ಪಡಿಸುವ ಬದಲು ರಾಜ್ಯಕ್ಕೆ ಬಂದು ಕರ್ನಾಟಕ ಬಗ್ಗೆ ಯೋಗಿ ಆದಿತ್ಯನಾಥ್ ಏಕೆ ಮಾತಾಡಬೇಕು? ನಿನ್ನೆಯ ಅವರ ಭಾಷಣದಲ್ಲಿ ಸತ್ಯಾಂಶವಿತ್ತಾ, ಸ್ಪಷ್ಟತೆ ಇತ್ತಾ. ಬೇರೆ ರಾಜ್ಯದಿಂದ ಬರೋರು ಕರ್ನಾಟಕವನ್ನು ತೆಗಳುವಷ್ಟು ರಾಜ್ಯವೇನೂ ಹದಗೆಟ್ಟಿಲ್ಲ, ಯೋಗಿಯಿಂದ ಪಾಠ ಕಲಿಯುವಂತ ಪರಿಸ್ಥಿತಿ ನಮಗಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.


ಸಂಬಂಧಿತ ಟ್ಯಾಗ್ಗಳು

Dinesh Gundu Rao KPCC ಕರ್ನಾಟಕ ಯಡಿಯೂರಪ್ಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ