ನರಗುಂದ ತಲುಪಿದ ವೈದ್ಯರ ಪಾದ ಯಾತ್ರೆ

Doctors supported mahadayi protest

07-03-2018

ಗದಗ: ಮಹದಾಯಿ ನದಿ ನೀರಿಗಾಗಿ ಕಳೆದ 968 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟದ ಜೊತೆಗೆ ರಾಜ್ಯದ ವೈದ್ಯ ಸಮೂಹ ಕೈಜೋಡಿಸಿದೆ. ಐಎಮ್ಎ ಅಧ್ಯಕ್ಷ ರವೀಂದ್ರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಮೂಲಕ ಬೆಂಗಳೂರಿನಿಂದ ಗದಗ ಜಿಲ್ಲೆ ನರಗುಂದ ಪಟ್ಟಣಕ್ಕೆ ವೈದ್ಯರ ತಂಡ ಆಗಮಿಸಿದೆ. ವೈದ್ಯರ ನಡಿಗೆ ರೈತರ ಕಡೆಗೆ ಎಂಬ ಹೆಸರಿನಲ್ಲಿ ಬೃಹತ್ ಪಾದಯಾತ್ರೆ ನಡೆಸಲಾಗಿದ್ದು, ಡಾ.ರವೀಂದ್ರ ಅವರಿಗೆ ಮಹದಾಯಿ ಹೋರಾಟಗಾರರು, ಗುಲಾಬಿ ಹೂ ನೀಡಿ ಹಸಿರು ಶಾಲು ಹಾಕಿ ಸ್ವಾಗತ ಕೋರಿದ್ದಾರೆ. ವೈದ್ಯರ ಪಾದಯಾತ್ರೆಯಲ್ಲಿ, ರೈತ ಪರ ಹೋರಾಟಗಾರರು, ವೈದ್ಯಕೀಯ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

doctors Mahadayi ಹೋರಾಟ ಪಾದಯಾತ್ರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ