ಒಂದೇ ನೊಂದಣಿ ಸಂಖ್ಯೆಯಲ್ಲಿ ಎರಡು ಬಸ್

Two buses in the same registration number

06-03-2018

ಮಂಡ್ಯ: ಒಂದೇ ನೊಂದಣಿ ಸಂಖ್ಯೆಯಲ್ಲಿ ಎರಡು ಬಸ್ಗಳು ಸಂಚಾರ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ  ಮಂಡ್ಯದ ಸಾರಿಗೆ ಅಧಿಕಾರಿಗಳು ಎರಡೂ‌ ಖಾಸಗಿ‌ ಬಸ್ಸುಗಳನ್ನು ಜಪ್ತಿ ಮಾಡಿದ್ದಾರೆ. ಮಂಡ್ಯದ ತಾವರೆ ನಿವಾಸಿ ನಂಜುಂಡೇಗೌಡ ಎಂಬುವರಿಗೆ ಎರಡೂ ಬಸ್ಸುಗಳು ಸೇರಿದ್ದು, ಒಂದು ಮಳವಳ್ಳಿಯಲ್ಲಿ ಮತ್ತೊಂದು‌ ಮೈಸೂರಿನಲ್ಲಿ‌ ಸಂಚರಿಸುತ್ತಿತ್ತು. ಇದನ್ನು ಪತ್ತೆ ಹಚ್ಚಿ, ಖಚಿತ ಮಾಹಿತಿ‌ ಮೇರೆಗೆ ಕಾರ್ಯಾಚರಣೆ ಮಾಡಿದ ಸಾರಿಗೆ ಅಧಿಕಾರಿಗಳು, ಅಕ್ರಮ ಎಸಗಿದ ಬಸ್ ಮಾಲೀಕನ ವಿರುದ್ದ ಮಳವಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

RTO Bus ಅಧಿಕಾರಿ ಮಾಲೀಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ