ಕಾರು ಚಾಲಕನ ಅಸಹ್ಯ ವರ್ತನೆ: ಯುವತಿ ದೂರು

Car driver

06-03-2018

ಬೆಂಗಳೂರು: ನಗರದ ಮೌಂಟ್ ಕಾರ್ಮೆಲ್ ಕಾಲೇಜು ಬಸ್‍ನಿಲ್ದಾಣದ ಬಳಿ ನಿಂತಿದ್ದ ಯುವತಿಯನ್ನ ನೋಡಿ ಕಾರು ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮಾರ್ಚ್ 3ರ ಭಾನುವಾರ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಯುವತಿಯು ಬಸ್‍ಗಾಗಿ ಕಾಯುತ್ತಾ ನಿಂತಿದ್ದಾಗ, ಕೆಎ-53ಸಿ1877 ನಂಬರಿನ ಕಾರಿನಲ್ಲಿ ಬಂದ ಚಾಲಕ ಹಸ್ತ ಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ.

ಯುವತಿ ತನ್ನ ದೂರಿನಲ್ಲಿ, ಕಾಲೇಜಿನ ಬಸ್ ನಿಲ್ದಾಣದ ಬಳಿ ತಾನು ನಿಂತಿದ್ದಾಗ ಕಾರಿನಲ್ಲಿ ಕುಳಿತಿದ್ದ ಚಾಲಕನೊಬ್ಬ ನನ್ನ ಕಡೆ ನೋಡಿಕೊಂಡು ಅಸಹ್ಯಕರವಾಗಿ ವರ್ತಿಸಿದ್ದಾನೆ. ಇದರಿಂದ ಭಯಗೊಂಡು ನಾನು ಬೇರೆಡೆ ತೆರಳಿದರೂ ಅಲ್ಲಿಗೂ ಕಾರು ಚಲಾಯಿಸಿಕೊಂಡು ಬಂದ ಆತ ಮತ್ತೆ ಅದೇ ರೀತಿ ವರ್ತಿಸಿ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಸಂತ್ರಸ್ಥ ಯುವತಿಯು ದೂರಿನಲ್ಲಿ ತಿಳಿಸಿದ್ದಾರೆ. ದೂರು ಆಧರಿಸಿ ಹೈ ಗ್ರೌಂಡ್ಸ್ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಹ್ಯವಾಗಿ ವರ್ತಿಸಿದ ಕಾರಿನ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೆಲದಿನಗಳ ಹಿಂದೆ ದೆಹಲಿಯಲ್ಲಿಯೂ ಈ ರೀತಿಯ ಕೃತ್ಯ ನಡೆದಿತ್ತು.


ಸಂಬಂಧಿತ ಟ್ಯಾಗ್ಗಳು

Harassment bus stop ಎಫ್‍ಐಆರ್ ಅಸಹ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ