ಕೆಪಿಜೆಪಿಗೆ ಉಪ್ಪಿ ಗುಡ್ ಬೈ...

upendra goodbye to kpjp party...

06-03-2018

ಬೆಂಗಳೂರು: ನಿರೀಕ್ಷೆಯಂತೆ ಕಡೆಗೂ ಕೆಪಿಜೆಪಿ ಪಕ್ಷಕ್ಕೆ ನಟ ಉಪೇಂದ್ರ ಗುಡ್ ಬೈ ಹೇಳಿದ್ದಾರೆ. ಬೆಂಬಲಿಗರು ಪದಾಧಿಕಾರಿಗಳೊಂದಿಗೆ ಪಕ್ಷಕ್ಕೆ ರಾಜೀನಾಮೆ ನೀಡುವ ಘೋಷಣೆ ಮಾಡಿದ ಉಪೇಂದ್ರ ಹೊಸ ಪಕ್ಷ ಸ್ಥಾಪಿಸುವುದಾಗಿ ಪ್ರಕಟಿಸಿದರು.

ನಗರದ ಹೊರವಲಯದ ದೊಡ್ಡ ಆಲದಮರದ ಸಮೀಪವಿರುವ ರೆಸಾರ್ಟ್ ಒಂದರಲ್ಲಿ ಪ್ರಮುಖರೊಂದಿಗೆ ಸಭೆ ನಡೆಸಿ, ಕೆಪಿಜೆಪಿಯಲ್ಲಿ ಮುಂದುವರೆಯಬೇಕೇ ಬೇಡವೇ, ಬಿಜೆಪಿ ಸೇರಿ ಇತರೆ ಪಕ್ಷದ ಜೊತೆ ಹೆಜ್ಜೆ ಹಾಕಬೇಕೆ ಎನ್ನುವುದು ಸೇರಿದಂತೆ ಪಕ್ಷದ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಚರ್ಚೆ ನಡೆಸಿದರು. ಅಂತಿಮವಾಗಿ ಕೆಪಿಜೆಪಿ ತೊರೆಯಬೇಕು, ಬೇರೆ ಪಕ್ಷದೊಂದಿಗೆ ಹೋಗುವ ಬದಲು ಹೊಸ ಪಕ್ಷ ಸ್ಥಾಪಿಸುವ ನಿರ್ಧಾರ ಕೈಗೊಂಡಿದ್ದಾರೆ.

ಸಭೆ ಬಳಿಕ ಮಾತನಾಡಿದ ಉಪೇಂದ್ರ, ನಮಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಕೆಪಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದು ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದೇವೆ, ಈಗಾಗಲೇ ತಜ್ಞರ ಅಭಿಪ್ರಾಯ ಪಡೆಯಲಾಗಿದ್ದು 45 ದಿನದಲ್ಲಿ ಹೊಸ ಪಕ್ಷ ರಚಿಸಬಹುದಾಗಿದೆ. ನಮ್ಮ ಬೆಂಬಲಿಗರೆಲ್ಲರೂ ಹೊಸ ಪಕ್ಷದ ಸದಸ್ಯತ್ವ ಪಡೆಯಲಿದ್ದು ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ಘೋಷಿಸಿದರು. ನಾವು ಪ್ರಜಾಕೀಯ ಮಾಡಿತ್ತೇವೆ, ಆ ಕಾನ್ಸೆಪ್ಟ್ ಬಿಟ್ಟು ನಾವು ಹೊರಬರಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಕೂಡ ಮುಂದೆ ಪ್ರಜಾಕೀಯ ಮಾಡಬಹುದು, ಈಗಾಗಲೇ ನಮ್ಮಲ್ಲಿ 200 ಜನ ಅಭ್ಯರ್ಥಿಗಳು ಇದ್ದಾರೆ, ಅದರಲ್ಲಿ 150 ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಿದ್ದೇವೆ, ಇನ್ನೂ 100 ಜನ ಬರುವವರಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

upendra politics ಪ್ರಜಾಕೀಯ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ