ತಾಯಿ-ಮಗ ಅನುಮಾನಾಸ್ಪದ ಸಾವು

Mother-son suspicious death in bengaluru

06-03-2018

ಬೆಂಗಳೂರು: ಕಾಡುಗೋಡಿಯ ಬೆಳ್ತೂರಿನ ಎಂಎಸ್‍ಸಿ ಎಂಪ್ರೆಸ್ ಅಪಾರ್ಟ್‍ಮೆಂಟ್ನ 5ನೇ ಮಹಡಿ ಮೇಲಿಂದ ಕೆಳಗೆ ಹಾರಿ ತಾಯಿ ಮತ್ತು ಮಗ ಇಬ್ಬರೂ ಶಂಕಾಸ್ಪದವಾಗಿ ಮೃತಪಟ್ಟಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ. ಮೃತ ತಾಯಿ-ಮಗನನ್ನು ಯಾದಗಿರಿ ಮೂಲದ ತಾಯಿ ಸುಂದರಮ್ಮ(60)  ಮೌನೇಶ್(36)ಎಂದು ಗುರುತಿಸಲಾಗಿದೆ. ಮೌನೇಶ್ ಕೆ.ಎಸ್‍.ಆರ್.ಟಿ.ಸಿ ಬಸ್ ಚಾಲಕರಾಗಿದ್ದು, 4 ದಿನದ ಹಿಂದಷ್ಟೇ ಯಾದಗಿರಿಯಿಂದ ಬೆಂಗಳೂರಿಗೆ ಬಂದಿದ್ದರು.

ಈ ಮೊದಲು ವಿವಾಹವಾಗಿ ಮಕ್ಕಳಿದ್ದ ಮೌನೇಶ್ ಇನ್ಸ್ಪೆಕ್ಟರ್ ಚಂದ್ರಪ್ಪ ಅವರ ಸಹೋದರಿಯನ್ನು ಪ್ರೀತಿಸುತ್ತಿದ್ದ ಅಲ್ಲದೇ ಆಕೆಯ ಜೊತೆ ಮೂರು ಬಾರಿ ಮೌನೇಶ್ ಮನೆ ಬಿಟ್ಟು ಹೋಗಿದ್ದನು.

ಇದಲ್ಲದೇ ಚಂದ್ರಪ್ಪ ಸಹೋದರಿ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದರಿಂದ ಕೋಪಗೊಂಡಿದ್ದ ಚಂದ್ರಪ್ಪ ಬುದ್ದಿ ಕಲಿಸಲು ಮೌನೇಶ್ ಹಾಗೂ ಅವರ ತಾಯಿಯನ್ನು ತಂದು ಫ್ಲಾಟ್‍ನಲ್ಲಿಟ್ಟು ಕೊಂಡಿದ್ದರು ಎಂದು ಹೇಳಲಾಗಿದೆ. ಆದರೆ ಅನುಮಾನಾಸ್ಪದ ರೀತಿಯಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಡಿಸಿಪಿ ಅಬ್ದುಲ್ ಅಹದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

suicide Apartment ಇನ್ಸ್ಪೆಕ್ಟರ್ ಪರಿಶೀಲನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ