ಕುಖ್ಯಾತ ಅಂತರ್ ರಾಜ್ಯ ಕಳ್ಳನ ಬಂಧನ

Interstate thief arrested in shimoga

06-03-2018

ಶಿವಮೊಗ್ಗ: ಕುಖ್ಯಾತ ಅಂತರ್ ರಾಜ್ಯ ಕಳ್ಳ ಕಡೂರು ಸಾದಿಕ್ ಮತ್ತು ಆತನ 11 ಜನ ಸಹಚರರನ್ನು ಜಿಲ್ಲೆಯ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 3ಕೆಜಿ ಬಂಗಾರ, 13.5 ಕೆಜಿ ಬೆಳ್ಳಿ, 2.5 ಲಕ್ಷ ನಗದು, ಹಾಗೂ ಮೂರು ಕಾರು, ಎರಡು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ 24 ಪೊಲೀಸ್ ಠಾಣೆಗಳಲ್ಲಿ ಸಾದಿಕ್ ಹಾಗೂ ಸಹಚರರ ಮೇಲೆ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು, ಎಸ್ಪಿ ಅಭಿನವ್ ಖರೆ ಹೇಳಿದ್ದಾರೆ. ಮತ್ತು ಸಾದಿಕ್ ಹಾಗೂ ಸಹಚರರ ಬಂಧನಕ್ಕೆ ಶ್ರಮಿಸಿದ ಪೊಲೀಸರ ತಂಡಕ್ಕೆ ವೈಯಕ್ತಿಕವಾಗಿ 50 ಸಾವಿರ ರೂ. ಹಣವನ್ನು ನೀಡಿ ಪ್ರಶಂಸಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Robbers arrested ಅಂತರ್ ರಾಜ್ಯ ವೈಯಕ್ತಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ