‘ಬಿಜೆಪಿಗೆ ಬಂದರೆ ಸ್ವಾಗತ’06-03-2018

ಮೈಸೂರು: ಕೆಪಿಜೆಪಿ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳಿಂದ ನಟ ಉಪೇಂದ್ರ ಅವರು ಹೊರಬರಲಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹಬ್ಬಿದ್ದು, ನಟ ಉಪೇಂದ್ರ ಬಿಜೆಪಿ ಪಕ್ಷಕ್ಕೆ ಬಂದರೆ ಅವರಿಗೆ ಸ್ವಾಗತವಿದೆ ಎಂದು ಸಂಸದ ಶ್ರೀರಾಮುಲು ಮೈಸೂರಲ್ಲಿ ಹೇಳಿದ್ದಾರೆ. ಕನ್ನಡ‌ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿ ಸಮಾಜದ ಬಗ್ಗೆಯೂ ಕಾಳಜಿ ಹೊಂದಿರುವ ನಟ ಉಪೇಂದ್ರ ಅವರು ಪಕ್ಷಕ್ಕೆ ಬರಲಿ ಎಂದು ಹೇಳಿದ್ದಾರೆ.

ಇನ್ನು ಮಾಜಿ ಸಚಿವ ಜನಾರ್ದನ‌ ರೆಡ್ಡಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ, ಬಳ್ಳಾರಿಗೆ ಹೋಗದಂತೆ ಕೋರ್ಟ್ ನಿರ್ದೇಶನವಿರುವ ಕಾರಣ ಅವರು ಅಲ್ಲಿ ಹೋಗುವುದಿಲ್ಲ, ಬದಲಿಗೆ ಬೇರೆ ಕಡೆ‌ ಪಕ್ಷದ ಸಂಘಟನೆ ಮಾಡಲಿದ್ದಾರೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

B. Sriramulu upendra ಜನಾರ್ದನ‌ ರೆಡ್ಡಿ ಆಂತರಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ