‘ಇನ್ನೂ ಸರ್ಕಾರದಿಂದ ನ್ಯಾಯ ಸಿಕ್ಕಿಲ್ಲ’05-03-2018

ಉಡುಪಿ: ಜಿಲ್ಲೆಯಲ್ಲಿ ನಡೆದ ಬಿಜೆಪಿಯ ಜನ ಸುರಕ್ಷಾ ಯಾತ್ರೆಯಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಮುಖಂಡರಾದ ಕೆ.ಎಸ್. ಈಶ್ವರಪ್ಪ, ಸುನೀಲ್ ಕುಮಾರ್, ಭಾರತಿ ಶೆಟ್ಟಿ ಭಾಗಿಯಾಗಿದ್ದರು. ಬೈಂದೂರು ಕ್ಷೇತ್ರದ ಉಪ್ಪುಂದದಲ್ಲಿ ಸಾರ್ವಜನಿಕ ಸಭೆಯೂ ನಡೆಯಿತು. ಸಭೆಯಲ್ಲಿ ಪರೇಶ್ ಮೇಸ್ತ ಹೆತ್ತವರು ಸಹ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಪರೇಶ್ ಮೇಸ್ತ ತಂದೆ ಕಮಲಾಕರ ಮೇಸ್ತ, ಮಗನ ಕೊಲೆಯಾಗಿ ಮೂರು ತಿಂಗಳಾಯ್ತು, ಇನ್ನೂ ರಾಜ್ಯ ಸರ್ಕಾರದಿಂದ ನ್ಯಾಯ ದೊರಕಿಲ್ಲ, ರಾಜ್ಯ ಸರ್ಕಾರದ ಕಣ್ಣು ಕುರುಡಾಗಿದೆ, ಸಿದ್ದರಾಮಯ್ಯ ಭ್ರಷ್ಟ ಸರ್ಕಾರ ತೊಲಗಲಿ, ಜನಸುರಕ್ಷಾ ಯಾತ್ರೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

paresh mesta BJP ಸಾರ್ವಜನಿಕ ಸರ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ