‘ಕಾಂಗ್ರೆಸ್ ಗೆ ಜನರೇ ಪಾಠ ಕಲಿಸುತ್ತಾರೆ’05-03-2018

ಬೆಂಗಳೂರು: ನೈಸ್ ಅಕ್ರಮದ ಬಗ್ಗೆ ಸಚಿವ ಜಯಚಂದ್ರ ನೇತೃತ್ವದ ಸಮಿತಿ ವರದಿ ಕೊಟ್ಟಿದೆ. ಅಕ್ರಮದಲ್ಲಿ ಕೋಟ್ಯಾಂತರ ರೂ. ಲೂಟಿಯಾಗಿದ್ದರೂ ಪ್ರಕರಣವನ್ನು ಕೋಲ್ಡ್ ಸ್ಟೋರ್ ನಲ್ಲಿಟ್ಟಿದ್ದು, ಈಗ ಸಿಎಂ ಸಿದ್ದರಾಮಯ್ಯ ಖೇಣಿಯವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ  ಕಿಡಿಕಾರಿದ್ದಾರೆ. 

ರಾಜ್ಯದ ಆಸ್ತಿ ಲೂಟಿ ಮಾಡಿರುವವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಸಿದ್ದರಾಮಯ್ಯನವರನ್ನು ನಗೆಪಾಟಿಲಿಗೀಡುಮಾಡಿದೆ, ನುಡಿದಂತೆ ನಡೆದಿದ್ದೇನೆ ಎಂದು ಸಿಎಂ ಹೇಳುತ್ತಾರೆ. ಅವರು ಹೇಳುವುದೇ ಬೇರೆ, ಕೃತಿಯಲ್ಲಿ ನಡೆದುಕೊಳ್ಳುವುದೆ ಬೇರೆ. ಬೆಂಗಳೂರಿನಲ್ಲಿ 25 ಸೀಟು ಗೆಲ್ಲುತ್ತೇನೆ ಎಂದು ಬೀಗುತ್ತಿದ್ದಾರೆ, ಸಿಎಂ ಉದ್ಧಟತನಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

 


ಸಂಬಂಧಿತ ಟ್ಯಾಗ್ಗಳು

Siddaramaiah H.D.Kumaraswamy ರಾಜ್ಯಾಧ್ಯಕ್ಷ ನೈಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ