ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ವಾಗ್ದಾಳಿ

Eshwarappa advocates against Congress

05-03-2018

ಉಡುಪಿ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಂದಾಪುರದಲ್ಲಿ ಮಾತನಾಡಿದ ಅವರು, ಯಾರಿಗೂ ನೆನಪಾಗದ ಟಿಪ್ಪು ಜಯಂತಿ ಮಾಡಿ ಧರ್ಮಗಳ ನಡುವೆ ಕಿಚ್ಚು ಹಚ್ಚಿದಿರಿ. ಕನಕದಾಸರ ಕಾಗೇರಿಗೆ, ಸಂಗೊಳ್ಳಿಯ ರಾಯಣ್ಣ ನೇಣು ಹಾಕಿದ ಜಾಗಕ್ಕೆ ಹೋಗಿದ್ರಾ ಇಲ್ಲ. ಮಠ ಮಂದಿರಗಳ‌ ಸ್ವಾಧೀನ ಪಡಿಸುವ ಹುನ್ನಾರ ಮಾಡಿದವರು ನೀವು, ಮಹಾದಾಯಿ ಯೋಜನೆಯ ಕುರಿತು ಒಂದು ಹನಿ‌ ನೀರು ಬಿಡೋಲ್ಲಾ ಎಂದವರು ನೀವು ಎಂದು ದೂರಿದರು. ಹ್ಯಾರಿಸ್ ಪ್ರಕರಣ ಗಮನಿಸಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಿತ್ತು. ಆದರೆ ಆರೋಪಿಗೆ ಬಿರಿಯಾನಿ ವ್ಯವಸ್ಥೆ ಯಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ನಾಶವಾಗುತ್ತದೆ, ಕರ್ನಾಟಕದಲ್ಲಿ ಕಾಂಗ್ರೆಸ್ ನ ಕೊನೆಯ ಮುಖ್ಯ ಮಂತ್ರಿ ಸಿದ್ದರಾಮಯ್ಯ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕೈಯಲ್ಲೇ ಅರ್.ಎಸ್.ಎಸ್.ಅನ್ನು ಮುಗಿಸಲು ಆಗಿಲ್ಲ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ